ಡಿಶ್ ಟಿವಿ- ಡಿಟಿಎಚ್ ಸಹಾಯವಾಣಿ, ಕಸ್ಟಮರ್ ಕೇರ್ ಮತ್ತು ಸಪೋರ್ಟ್
Recharge, Manage your Account & Explore Exciting Offers!
close
DTH India, Digital TV, DTH Services| Dish TV
  • ತ್ವರಿತ ರೀಚಾರ್ಜ್

  • New Connection ಹೊಸ ಕನೆಕ್ಷನ್
  • Need Help ಸಹಾಯ ಪಡೆಯಿರಿ
  • My Account ಲಾಗಿನ್‌
    My Account ನನ್ನ ಅಕೌಂಟ್
    Manage Your Packs ನಿಮ್ಮ ಪ್ಯಾಕ್‌ಗಳನ್ನು ನಿರ್ವಹಿಸಿ
    Self Help ಸ್ವಸಹಾಯ
    Complaint Tracking ದೂರು ಟ್ರ್ಯಾಕಿಂಗ್
WhatsApp Icon
ವಾಟ್ಸಾಪ್
9953060680
WhatsApp Icon
ಕರೆ ಮಾಡಿ
95017-95017
(ಲೋಕಲ್ ಕರೆ ಶುಲ್ಕ ಅನ್ವಯ)
New Connection Icon
ಹೊಸ ಕನೆಕ್ಷನ್
ಹೊಸ ಕನೆಕ್ಷನ್ ಬುಕ್ ಮಾಡಲು ಈ ನಂಬರ್‌ಗೆ ಮಿಸ್ ಕಾಲ್ ಕೊಡಿ
1800-270-0300
Shifting DishTv Icon
ಡಿಶ್ ಟಿವಿಯನ್ನು ಶಿಫ್ಟ್ ಮಾಡಲಾಗುತ್ತಿದೆ
ನೀವು ಮನೆ ಶಿಫ್ಟ್ ಮಾಡುತ್ತಿದ್ದೀರಾ? ನಿಮ್ಮ ಡಿಶ್ ಟಿವಿಯನ್ನು ಜೊತೆಗೆ ಕೊಂಡೊಯ್ಯಿರಿ.
Please click on
bit.ly/3wfXfRo for
further assistance.
Online Affiliate Icon
ನಮ್ಮ
ಆನ್ಲೈನ್ ಅಂಗಸಂಸ್ಥೆಯಾಗಿ
ಅನನ್ಯ ಅನುಭವಕ್ಕಾಗಿ ಕನಿಷ್ಠ ಹೂಡಿಕೆ ಮಾಡುವ ಮೂಲಕ ಆಕರ್ಷಕ ಮಾಸಿಕ ಪ್ರೋತ್ಸಾಹಗಳನ್ನು ಗಳಿಸಲು ಡಿಶ್ ಟಿವಿಯೊಂದಿಗೆ ನಿಮ್ಮ ಪ್ರಯಾಣವನ್ನು ಆರಂಭಿಸಿ.
Dealer Locater Icon
ಡೀಲರ್ ಲೊಕೇಟರ್
Nodal Officers Icon
ನಮ್ಮ ನೋಡಲ್ ಅಧಿಕಾರಿಗಳು
ಡಿಶ್ ಟಿವಿಯನ್ನು ಸಂಪರ್ಕಿಸಿ
ನೋಡಲ್ ಅಧಿಕಾರಿಗಳು ಅನುಕೂಲಕರವಾಗಿ
Corporate Communication Icon
ಕಾರ್ಪೊರೇಟ್ ಕಮ್ಯೂನಿಕೇಷನ್
Avail of great deals & offerings on corporate and bulk connections. For Enquiries please mail to Amardeep@dishd2h.com, Pankaj.sardana@dishd2h.com
Address Icon
ವಿಳಾಸ
ಡಿಶ್ ಟಿವಿ ಇಂಡಿಯಾ ಲಿಮಿಟೆಡ್. ಎಫ್‌ಸಿ-19, ಸೆಕ್ಟರ್ 16ಎ, ಫಿಲ್ಮ್ ಸಿಟಿ, ನೋಯ್ಡಾ, ಉತ್ತರ ಪ್ರದೇಶ, ಭಾರತ.
ಪಿನ್ ಕೋಡ್-201301
Self Help Icon
ಸ್ವಯಂ ಸಹಾಯ/ನಮಗೆ ಬರೆಯಿರಿ
ಡು-ಇಟ್-ಯುವರ್‌ಸೆಲ್ಫ್ ಸೇವೆ
My Account Icon
ನನ್ನ ಅಕೌಂಟ್

ನಮಗೆ ಮಿಸ್ಡ್ ಕಾಲ್ ಕೊಡಿ

ನಿಮ್ಮ ಅಕೌಂಟನ್ನು ಅಪ್ಡೇಟ್ ಮಾಡಲು -
1800 274 4744.

ನಿಮ್ಮ ಅಕೌಂಟ್ ಮಾಹಿತಿಯನ್ನು ತಿಳಿದುಕೊಳ್ಳಲು - 1800 274 9000.
Activate Channel Icon
ಒಂದು ಚಾನೆಲ್ ಆ್ಯಕ್ಟಿವೇಟ್ ಮಾಡಿ
1800-568-XXXX 3 ಡಿಜಿಟ್ ಚಾನೆಲ್‌ಗಳಿಗೆ XXXX ಬದಲಿಗೆ ಚಾನೆಲ್ ನಂಬರ್‌ ನಮೂದಿಸಿ, ಚಾನೆಲ್ ನಂಬರ್‌ಗಿಂತ ಮೊದಲು "0" ಸೇರಿಸಿ. ಸಕ್ರಿಯಗೊಳಿಸಲು 15 ನಿಮಿಷಗಳ ಅನುಮತಿ ನೀಡಿ.
Recharge Icon
3 ದಿನಗಳ ಹೆಚ್ಚುವರಿ

ರಿಚಾರ್ಜ್ ಮಾಡಲು

1800-274-9050 ಟಿವಿ ವೀಕ್ಷಣೆಯ 3 ಹೆಚ್ಚುವರಿ ದಿನಗಳನ್ನು ಆನಂದಿಸಿ. 3 ದಿನಗಳ ಶುಲ್ಕಗಳು ಮತ್ತು ₹10 ಸೇವಾ ಶುಲ್ಕವನ್ನು ನಿಮ್ಮ ಮುಂದಿನ ರಿಚಾರ್ಜ್‌ನಲ್ಲಿ ಸರಿಹೊಂದಿಸಲಾಗುತ್ತದೆ.
Great Offers Icon
ಉತ್ತಮ ಆಫರ್‌ಗಳು

ಕೇವಲ ನಿಮಗೆ ಮಾತ್ರ

87506-87506 ನಿಮ್ಮ ಅಕೌಂಟ್‌ಗೆ ವಿಶೇಷವಾಗಿ ಲಭ್ಯವಿರುವ ಕಸ್ಟಮೈಜ್ ಮಾಡಿದ ಆಫರ್‌ಗಳ ಬಗ್ಗೆ ಎಸ್‌ಎಂಎಸ್ ಮೂಲಕ ಮಾಹಿತಿ ಪಡೆಯಿರಿ. ನಿಮ್ಮ ನಿಯಮಿತ ರಿಚಾರ್ಜ್‌ಗಳ ಮೇಲೆ ಹಣಕ್ಕೆ ತಕ್ಕ ಉತ್ತಮ ಮೌಲ್ಯವನ್ನು ಆನಂದಿಸಿ.
Error On TV Icon
ಟಿವಿಯಲ್ಲಿ 101/102 ದೋಷ
ರಿಚಾರ್ಜ್ ಮಾಡಿದ ನಂತರ ಸೇವೆಗಳು ಪುನರಾರಂಭ ಆಗಲಿಲ್ಲವೇ ಅಥವಾ ಸಬ್‌ಸ್ಕ್ರೈಬ್ ಮಾಡಿದ ಚಾನೆಲ್‌ಗಳನ್ನು ನೋಡಲು ಸಾಧ್ಯವಾಗುತ್ತಿಲ್ಲವೇ? 1800-270-2102 ಗೆ ಮಿಸ್ ಕಾಲ್ ಕೊಡಿ ಮತ್ತು 15 ನಿಮಿಷಗಳವರೆಗೆ ನಿಮ್ಮ ಬಾಕ್ಸ್ ಆನ್ ಮಾಡಿ ಇಡಿ.
New DishTV Connection
ಹೊಸ ಡಿಶ್ ಟಿವಿ ಕನೆಕ್ಷನ್
Pack
ಟ್ರಾಯ್ (TRAI) ನಿಯಮಾವಳಿ
Recharge
ರಿಚಾರ್ಜ್
Service
ಸೇವೆ
Set Top Box & Hardware
ಸೆಟ್ ಟಾಪ್ ಬಾಕ್ಸ್ & ಹಾರ್ಡ್‌ವೇರ್
modes of recharge
ರೀಚಾರ್ಜ್ ಪ್ರಕಾರಗಳು
ನಾನು ಹೊಸ ಡಿಶ್ ಟಿವಿ ಕನೆಕ್ಷನ್ ಅನ್ನು ಎಲ್ಲಿ ಪಡೆಯಬಹುದು?
ನೀವು ನಮ್ಮ ವೆಬ್‌ಸೈಟ್ ನಲ್ಲಿ ಡಿಶ್ ಟಿವಿ ಕನೆಕ್ಷನ್ ಅನ್ನು ಆನ್ಲೈನ್‌ನಲ್ಲಿ ಖರೀದಿಸಬಹುದು. ಯಾವ ರೀತಿಯ ಕನೆಕ್ಷನ್ ಪಡೆಯಬೇಕು ಎಂಬ ಕುರಿತು ನಿಮಗೆ ಸಹಾಯ ಬೇಕಾದರೆ, ನೀವು 1800-270-0300 ಗೆ ಮಿಸ್ ಕಾಲ್ ಕೊಡಬಹುದು .
ಭಾರತದಾದ್ಯಂತ ಡಿಶ್ ಟಿವಿ ಲಭ್ಯವಿದೆಯೇ?
ಹೌದು, ಡಿಶ್ ಟಿವಿ ಈಗ ಭಾರತದಾದ್ಯಂತ ಲಭ್ಯವಿದೆ. ಕೆಲವು ರೀತಿಯ ಕನೆಕ್ಷನ್‌ಗಳು (ನಮ್ಮ ಸ್ಮಾರ್ಟ್ ಬಾಕ್ಸ್‌ ರೀತಿಯ) ನೀವು ವಾಸಿಸುವ ನಗರ/ಪ್ರದೇಶದಲ್ಲಿ ಸೀಮಿತ ಲಭ್ಯತೆಯನ್ನು ಹೊಂದಿರಬಹುದು. ಇನ್ನಷ್ಟು ತಿಳಿಯಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ.
ಡಿಶ್ ಟಿವಿ ಅದರ ಸ್ಪರ್ಧಿಗಳಿಗಿಂತ ಹೇಗೆ ಉತ್ತಮವಾಗಿದೆ?
ಡಿಶ್ ಟಿವಿಯು ಸಾಟಿಯಿಲ್ಲದ HD ಚಿತ್ರ ಗುಣಮಟ್ಟ ಮತ್ತು ಕ್ರಿಸ್ಟಲ್ ಸ್ಪಷ್ಟ ಧ್ವನಿಯನ್ನು ಒದಗಿಸುತ್ತದೆ. ನಮ್ಮ ತಾಂತ್ರಿಕ ಶ್ರೇಷ್ಠತೆ, ನಮ್ಮ ವ್ಯಾಪ್ತಿ ಮತ್ತು ಕಡಿಮೆ ವೆಚ್ಚವು ನಮ್ಮ ಪ್ರತಿಸ್ಪರ್ಧಿಗಳಿಂದ ನಮ್ಮನ್ನು ಪ್ರತ್ಯೇಕಿಸುತ್ತದೆ. ಡಿಶ್ ಟಿವಿ ಭಾರತದಲ್ಲಿ ಲಭ್ಯವಿರುವ ಅತ್ಯುತ್ತಮ ಮತ್ತು ಕೈಗೆಟಕುವ ಡಿಟಿಎಚ್ ಸೇವೆಯಾಗಿದೆ.
ನಾನು ಡಿಶ್ ಟಿವಿ ಡೆಮೋ ಎಲ್ಲಿ ನೋಡಬಹುದು?
ನಿಮ್ಮ ಹತ್ತಿರದ ಅಧಿಕೃತ ಡೀಲರ್‌ ಬಳಿ ನೀವು ಡಿಶ್ ಟಿವಿಯ ಹೊಸ ಮತ್ತು ಆಕರ್ಷಕ ಜಗತ್ತನ್ನು ಅನುಭವಿಸಬಹುದು. ನಿಮ್ಮ ಹತ್ತಿರದ, ಗ್ರಾಹಕ ಬಾಳಿಕೆಯ ಹೆಚ್ಚಿನ ಔಟ್ಲೆಟ್‌ಗಳು, ಡೆಮೋ ನೀಡಲು ಮತ್ತು ಡಿಶ್ ಟಿವಿ ಕನೆಕ್ಷನ್‌ಗಳನ್ನು ಮಾರಾಟ ಮಾಡಲು ಅಧಿಕಾರ ಹೊಂದಿವೆ. ನಿಮ್ಮ ಹತ್ತಿರದ ಡಿಶ್ ಟಿವಿ ಡೀಲರ್ ಅನ್ನು ಹುಡುಕಲು ಡೀಲರ್ ಲೊಕೇಟರ್ ಟೂಲ್ ಗೆ ಭೇಟಿ ನೀಡಿ.
ಹೊಸ ಡಿಶ್ ಟಿವಿ ಕನೆಕ್ಷನ್ ಮೇಲೆ ನಾನು ರಿಯಾಯಿತಿ ಪಡೆಯಬಹುದೇ?
ಹೊಸ ಡಿಶ್ ಟಿವಿ ಕನೆಕ್ಷನ್‌ಗಳ ಮೇಲೆ ಹೆಚ್ಚಿನ ಸಮಯ ನಾವು ಅತ್ಯಾಕರ್ಷಕ ಆಫರ್‌ಗಳನ್ನು ನೀಡುತ್ತೇವೆ. ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.
ನನ್ನ ಹೊಸ ಡಿಶ್ ಟಿವಿ ಕನೆಕ್ಷನ್‌ಗೆ ನಾನು ವಾರಂಟಿ ಪಡೆಯುತ್ತೇನೆಯೇ?
ಹೌದು, ನಿಮ್ಮ ಹೊಸ ಡಿಶ್ ಟಿವಿ ಕನೆಕ್ಷನ್‌ಗೆ ನೀವು ವಾರಂಟಿಯನ್ನು ಪಡೆಯುತ್ತೀರಿ ನೀಡಲಾದ ವಾರಂಟಿಯ ವಿವರಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ:
  • ಸೆಟ್-ಟಾಪ್-ಬಾಕ್ಸ್ ಯುನಿಟ್ ಮೇಲೆ ಮಾತ್ರ 5 ವರ್ಷದ ವಾರಂಟಿ
  • ಇನ್ಸ್ಟಾಲೇಶನ್ ಮೇಲೆ 1 ವರ್ಷದ ವಾರಂಟಿ
  • ಎಲ್‌ಎನ್‌ಬಿ, ರಿಮೋಟ್ ಮತ್ತು ಪವರ್ ಅಡಾಪ್ಟರ್ ಮೇಲೆ 1 ವರ್ಷದ ವಾರಂಟಿ
ಗಮನಿಸಿ: ಮೇಲೆ ವಿವರಿಸಿದ ವಾರಂಟಿಯ ಪ್ರಯೋಜನಗಳನ್ನು ಪಡೆಯಲು, ಗ್ರಾಹಕರು ಸತತವಾಗಿ 30 ದಿನಗಳಿಗಿಂತ ಹೆಚ್ಚು ಅವಧಿಗೆ ಕನೆಕ್ಷನ್ ನಿಷ್ಕ್ರಿಯಗೊಂಡಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
ನಾನು ಯಾವ ಹಾರ್ಡ್‌ವೇರ್ ಪಡೆಯಬೇಕು?
ಸೆಟ್-ಟಾಪ್-ಬಾಕ್ಸ್ ಕಂಟ್ರೋಲ್ ಮಾಡಲು ನಿಮಗೆ ಸೆಟ್-ಟಾಪ್-ಬಾಕ್ಸ್, ಡಿಶ್ ಆಂಟೆನಾ ಮತ್ತು ರಿಮೋಟ್ ಅಗತ್ಯವಿದೆ ಈ ಎಲ್ಲಾ ಹಾರ್ಡ್‌ವೇರ್ ಹೊಸ ಡಿಶ್ ಟಿವಿ ಕನೆಕ್ಷನ್‌ನೊಂದಿಗೆ ಬರುತ್ತದೆ ಇನ್‌ಸ್ಟಾಲೇಶನ್ ಶುಲ್ಕಗಳು ಮತ್ತು ಕೇಬಲ್‌ ಶುಲ್ಕಗಳು ಹೆಚ್ಚುವರಿಯಾಗಿರಬಹುದು.
ಡಿಶ್ ಆಂಟೆನಾವನ್ನು ಎಲ್ಲಿ ಇನ್ಸ್ಟಾಲ್ ಮಾಡಲಾಗುತ್ತದೆ?
ಸ್ಯಾಟಲೈಟ್‌ನಿಂದ ತಡೆರಹಿತ ಸಿಗ್ನಲ್‌ಗಳನ್ನು ಪಡೆಯಲು ಸ್ಪಷ್ಟವಾಗಿ ಆಕಾಶವು ಕಾಣುವಂತಹ ಮುಕ್ತ ಜಾಗದಲ್ಲಿ ಡಿಶ್ ಆಂಟೆನಾವನ್ನು ಸ್ಥಾಪಿಸಲಾಗುತ್ತದೆ ಇದನ್ನು ಚಾವಣಿ, ವರಾಂಡ, ಟೆರೇಸ್ ಅಥವಾ ಬಾಲ್ಕನಿ ಇತ್ಯಾದಿಗಳಲ್ಲಿ ಇನ್ಸ್ಟಾಲ್ ಮಾಡಬಹುದು.
ಪ್ರತಿ ರೂಮ್‌ಗೆ ನಾನು ಪ್ರತ್ಯೇಕ ಡಿಶ್ ಟಿವಿ ಕನೆಕ್ಷನ್ ಪಡೆಯಬೇಕೇ?
ಹೌದು, ಪ್ರತಿ ಟಿವಿಗೆ ನಿಮಗೆ ಪ್ರತ್ಯೇಕ ಸೆಟ್-ಟಾಪ್-ಬಾಕ್ಸ್ ಅಗತ್ಯವಿರುತ್ತದೆ. ನಾಮಮಾತ್ರದ ವೆಚ್ಚದಲ್ಲಿ ನಿಮ್ಮ ಪ್ರಾಥಮಿಕ ಸಂಪರ್ಕದೊಂದಿಗೆ ನೀವು 3 ವರೆಗೆ ಹೆಚ್ಚುವರಿ ಸಂಪರ್ಕಗಳನ್ನು ಸೇರಿಸಬಹುದು.
ಡಿಶ್ ಸೆಟ್-ಟಾಪ್-ಬಾಕ್ಸಿನಲ್ಲಿ ನಾನು ಯುಟ್ಯೂಬ್ ಮತ್ತು ಇತರ ಒಟಿಟಿ ಕಾರ್ಯಕ್ರಮಗಳನ್ನು ನೋಡಬಹುದೇ?
ಹೌದು, ಈಗ ಡಿಶ್ ಟಿವಿ ಸ್ಮಾರ್ಟ್/ಕನೆಕ್ಟೆಡ್ ಸೆಟ್-ಟಾಪ್-ಬಾಕ್ಸ್ ಆಗಿರುವ Dish SMRTHUB ಜೊತೆಗೆ, ನೀವು ಎರಡೂ ಜಗತ್ತಿನಲ್ಲೂ ಅತ್ಯುತ್ತಮವಾದದನ್ನು ಹೊಂದಬಹುದು. Dish SMRTHUB ಜೊತೆಗೆ, ನೀವು ನಿಯಮಿತ ಟಿವಿ ಚಾನೆಲ್‌ಗಳನ್ನು ಮತ್ತು ಯುಟ್ಯೂಬ್, ಅಮೆಜಾನ್ ಪ್ರೈಮ್ ಮತ್ತು Watcho ನಂತಹ ಒಟಿಟಿ ಸೇವೆಗಳನ್ನು ನೋಡಬಹುದು. ಇನ್ನಷ್ಟು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ. ಒಟಿಟಿ ಸೇವೆಗಳಿಗೆ ಸಬ್‌ಸ್ಕ್ರಿಪ್ಷನ್, ಯಾವುದಾದರೂ ಇದ್ದರೆ, ಪ್ರತ್ಯೇಕವಾಗಿ ಖರೀದಿಸಬೇಕು.
ಟ್ರಾಯ್ (TRAI) ಎಂದರೇನು?
ಭಾರತದ ದೂರವಾಣಿ ನಿಯಂತ್ರಣ ಪ್ರಾಧಿಕಾರ (TRAI), ಇದೊಂದು ಸ್ವತಂತ್ರ ನಿಯಂತ್ರಣ ಪ್ರಾಧಿಕಾರವಾಗಿದ್ದು ಭಾರತದ ದೂರಸಂಪರ್ಕ ಉದ್ಯಮದ ಉಸ್ತುವಾರಿ ಮಾಡುತ್ತದೆ.
ಟ್ರಾಯ್ (TRAI) ನ ಹೊಸ ಮ್ಯಾಂಡೇಟ್ ಏನು?
ಭಾರತದ ದೂರವಾಣಿ ನಿಯಂತ್ರಣ ಪ್ರಾಧಿಕಾರವು ಎಲ್ಲಾ ಕೇಬಲ್ ಮತ್ತು ಡಿಟಿಎಚ್ ಆಪರೇಟರ್ ಅವರಿಗೆ ಅನ್ವಯವಾಗುವ ಹೊಸ ನಿಯಮಾವಳಿಗಳನ್ನು ಬಿಡುಗಡೆ ಮಾಡಿದೆ. ಇನ್ನೇನು ಜಾರಿಯಾಗುವ ಈ ನಿಯಮಾವಳಿಗಳ ಅಡಿಯಲ್ಲಿ, ಪ್ರಸಾರಕರು ತಮ್ಮ ವೆಬ್ಸೈಟ್‌ಗಳಲ್ಲಿ ತಮ್ಮ ಚಾನೆಲ್‌ಗಳ ಬೆಲೆಯನ್ನು ಘೋಷಿಸಬೇಕು. ಈ ಹೊಸ ಬೆಲೆಗಳ ಪ್ರಕಾರ ಗ್ರಾಹಕರು ಈ ಚಾನಲ್‌ಗಳು ಮತ್ತು ಬೊಕೇಗಳಿಗೆ ಸಬ್‌ಸ್ಕ್ರೈಬ್ ಮಾಡಲು ಸಮರ್ಥರಾಗುತ್ತಾರೆ. ನಿಮ್ಮ ಆಯ್ಕೆಯ ಚಾನಲ್‌ಗಳನ್ನು ನೀವು ನೋಂದಣಿ ಮಾಡಲು ಬಯಸಿದರೆ ಇಲ್ಲಿ ಕ್ಲಿಕ್ ಮಾಡಿ
ನನ್ನ ಸಬ್‌ಸ್ಕ್ರಿಪ್ಶನ್ನಿಗೆ ಈಗ ಹೇಗೆ ಶುಲ್ಕ ವಿಧಿಸಲಾಗುತ್ತದೆ?
ಸಾಮಾನ್ಯವಾಗಿ, ನಿಮ್ಮ ಸಬ್‌ಸ್ಕ್ರಿಪ್ಷನ್ ಶುಲ್ಕಗಳು ಎರಡು ಅಂಶಗಳನ್ನು ಒಳಗೊಂಡಿವೆ. ಒಂದನ್ನು ನೆಟ್ವರ್ಕ್ ಕೆಪ್ಯಾಸಿಟಿ ಶುಲ್ಕ (ಎನ್‌ಸಿಎಫ್) ಎಂದು ಕರೆಯಲಾಗುತ್ತದೆ. ಇದು ಸಬ್‌ಸ್ಕ್ರಿಪ್ಷನ್ ಮೇಲಿನ ಬಾಡಿಗೆ ಶುಲ್ಕದಂತಿರುತ್ತದೆ. ಇನ್ನೊಂದು ನೀವು ಆಯ್ಕೆಮಾಡುವ ಯಾವುದೇ ಪೇ ಚಾನೆಲ್‌ಗಳು, ಅ ಲಾ ಕಾರ್ಟೆ ಅಥವಾ ಯಾವುದೇ ಬೊಕೆ / ಕಾಂಬೋ ಬೆಲೆಯಾಗಿರಬಹುದು. ಚಾನಲ್‌ಗಳು ಉಚಿತ (₹ 0) ಅಥವಾ ಪ್ರತಿ ತಿಂಗಳಿಗೆ ಪ್ರಕಟಿಸಲಾದ ಎಂಆರ್‌ಪಿ ಹೊಂದಿರುವ ಪಾವತಿ ಚಾನಲ್ ಆಗಿರಬಹುದು. ಬೊಕೆಗಳು, ಕಾಂಬೋಗಳು ಮತ್ತು ಆ್ಯಡ್ ಆನ್‌ಗಳ ಬೆಲೆ ಮತ್ತು ಅವುಗಳ ಚಾನಲ್ ವಿವರಗಳ ಮಾಹಿತಿಯು ನಮ್ಮ ವೆಬ್ಸೈಟಿನಲ್ಲಿ ನಿಮಗಾಗಿ ಒದಗಿಸಲಾಗಿದೆ.
ನನ್ನ ಅಗತ್ಯಗಳಿಗೆ ಅನುಗುಣವಾಗಿ ನಾನು ಹೇಗೆ ಚಾನಲ್‌ ಅನ್ನು ಆಯ್ಕೆ ಮಾಡಿಕೊಳ್ಳುವುದು?
ಒಂದುವೇಳೆ ನೀವು ನಿಮ್ಮ ಆಯ್ಕೆಯ ಚಾನಲ್‌ಗಳ ಪ್ಯಾಕ್ ಮಾಡಲು ಬಯಸಿದ್ದಲ್ಲಿ ನೀವು ಇಲ್ಲಿ ಕ್ಲಿಕ್ ಮಾಡಿ
ತಗಲುವ ಬೆಲೆಗಳು ಮತ್ತು ನಿಯಮಗಳನ್ನೂ ಪೇಜ್ ಮೇಲೆ ಪಟ್ಟಿ ಮಾಡಲಾಗಿದೆ.
ನಮ್ಮ ವೇದಿಕೆಯಲ್ಲಿನ ಬೊಕೇಗಳ ಮತ್ತು ಚಾನಲ್‌ಗಳ ಪಟ್ಟಿಯನ್ನು ಮತ್ತು ಅವುಗಳ ಬೆಲೆಗಳನ್ನು ಪಡೆಯಲು, ಇಲ್ಲಿ ಕ್ಲಿಕ್ ಮಾಡಿ
ಹೊಸ ಟಾರಿಫ್ ರೆಜೀಮ್ ಕುರಿತು ನಾನು ಹೇಗೆ ಹೆಚ್ಚಿನ ಮಾಹಿತಿ ಪಡೆಯುವುದು?
ಈ ಬಗ್ಗೆ ನಮ್ಮ ಚಾನಲ್ 999 ನಲ್ಲಿ ನೀವು ಸಂಪೂರ್ಣ ಮಾಹಿತಿ ಪಡೆಯಬಹುದು. ನಮ್ಮ ವೆಬ್ಸೈಟ್‌ನಲ್ಲಿರುವ ಗ್ರಾಹಕ ಸೇವೆಯನ್ನೂ ನೀವು ಸಂಪರ್ಕಿಸಬಹುದು.
ಎನ್‌ಟಿಒ ಪ್ರಕಾರ ನಾನು ನನ್ನ ಪ್ಯಾಕ್ ಅನ್ನು ಈಗಾಗಲೇ ಆಯ್ಕೆ ಮಾಡಿಕೊಂಡಿದ್ದೇನೆ. ಈ ವಿಸ್ತರಣೆಯ ದೆಸೆಯಿಂದ ನಾನು ಆಯ್ಕೆ ಮಾಡಿದ ಪ್ಯಾಕ್ ಮೇಲೆ ಯಾವುದೇ ಪರಿಣಾಮ ಉಂಟಾಗುವುದೇ?
ನೀವು ಹೊಸ ಪ್ಲಾನನ್ನು ಆಯ್ಕೆ ಮಾಡಿಕೊಂಡು ಸರಿಯಾದ ತೀರ್ಮಾನ ಮಾಡಿದ್ದೀರಿ ಮತ್ತು ಹೊಸ ಟಾರಿಫ್ ರೆಜೀಮ್ ಲಾಭಗಳನ್ನು ಆನಂದಿಸುವುದನ್ನು ಮುಂದುವರೆಸಿ.
ನನ್ನ DishTV ಅಕೌಂಟ್‌ ಅನ್ನು ರಿಚಾರ್ಜ್ ಮಾಡುವ ವಿವಿಧ ವಿಧಾನಗಳು/ಮೋಡ್‌ಗಳು ಯಾವುವು?
ನೀವು ವೈವಿಧ್ಯಮಯ ಪಾವತಿ ವಿಧಾನಗಳನ್ನು ಬಳಸಿ ನಿಮ್ಮ ಡಿಶ್ ಟಿವಿ ಅಕೌಂಟ್ ರಿಚಾರ್ಜ್ ಮಾಡಬಹುದು, ಉದಾ
  • DishTV ವೆಬ್‌ಸೈಟ್‌ನಿಂದ ರಿಚಾರ್ಜ್ ಪೇಜ್,ಈ ರೀತಿಯ ವಿವಿಧ ವಿಧಾನಗಳನ್ನು ಬಳಸಿ:
  • o ಯುಪಿಐ
  • o ನೆಟ್ ಬ್ಯಾಂಕಿಂಗ್
  • o ಕ್ರೆಡಿಟ್ ಕಾರ್ಡ್
  • o ಡೆಬಿಟ್ ಕಾರ್ಡ್
  • o Wallets (Airtel Money, Amazon Pay, Freecharge, Jiomoney, Mobikwik, Ola Money, PayTM, PhonePe)
  • My DishTV ಆ್ಯಪ್‌ನಿಂದ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
  • watcho ಆ್ಯಪ್‌ನಿಂದ, ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
  • ಸ್ವತಂತ್ರ ವಾಲೆಟ್ ಆ್ಯಪ್‌ಗಳನ್ನು ಬಳಸಿ (ಉದಾ. ಅಮೆಜಾನ್ ಪೇ, ಗೂಗಲ್ ಪೇ, ಪೇಟಿಎಂ, ಫೋನ್‌ಪೇ ಇತ್ಯಾದಿ)
  • ಸ್ಥಳೀಯ ಡಿಶ್ ಟಿವಿ ಡೀಲರ್ ಮೂಲಕ, ನಿಮ್ಮ ಹತ್ತಿರದ ಡೀಲರ್‌ನ ಸ್ಥಳವನ್ನು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
  • ಎಲೆಕ್ಟ್ರಾನಿಕ್ ಕ್ಲಿಯರೆನ್ಸ್ ಸ್ಕೀಮ್ ಮೂಲಕ
  • ಪೇ ಆರ್ಡರ್/ ಡಿಮ್ಯಾಂಡ್ ಡ್ರಾಫ್ಟ್/ ಆ್ಯಟ್ ಪಾರ್ ಚೆಕ್
ಡಿಶ್ ಟಿವಿ ಮೊಬೈಲ್ ಆ್ಯಪ್‌ನಿಂದ ನನ್ನ ಡಿಶ್ ಟಿವಿ ಅಕೌಂಟ್ ಅನ್ನು ನಾನು ಹೇಗೆ ರಿಚಾರ್ಜ್ ಮಾಡಬಹುದು?
ಮೈ ಡಿಶ್ ಟಿವಿ ಮೊಬೈಲ್ ಆ್ಯಪ್‌ನಿಂದ ನಿಮ್ಮ ಡಿಶ್ ಟಿವಿ ಡಿಟಿಎಚ್ ಅಕೌಂಟ್ ರಿಚಾರ್ಜ್ ಮಾಡುವುದು ತುಂಬಾ ಸುಲಭ. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಡಿಶ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ ಮತ್ತು ನಿಮ್ಮ ಕ್ರೆಡೆನ್ಶಿಯಲ್‌ಗಳನ್ನು ಬಳಸಿ ಲಾಗಿನ್ ಮಾಡಿ. "ರಿಚಾರ್ಜ್" ಮೇಲೆ ಟ್ಯಾಪ್ ಮಾಡಿ. ಒಂದು ಆಫರ್ ಅನ್ನು ಆಯ್ಕೆ ಮಾಡಿ ಅಥವಾ ನಿಮ್ಮ ಮಾಸಿಕ ರಿಚಾರ್ಜ್ ಮೊತ್ತದೊಂದಿಗೆ ರಿಚಾರ್ಜ್ ಮಾಡಲು ಮುಂದುವರೆಯಿರಿ. ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳಿಂದ ಹಿಡಿದು, ಪೇಟಿಎಂ ಮತ್ತು/ಅಥವಾ ಗೂಗಲ್ ಪೇ ರೀತಿಯ ಮೊಬೈಲ್ ವಾಲೆಟ್‌ಗಳವರೆಗೆ ಹಲವಾರು ಶ್ರೇಣಿಯ ಪರ್ಯಾಯಗಳನ್ನು ಬಳಸಿ ಪಾವತಿ ಮಾಡಬಹುದು. ಮೈ ಡಿಶ್ ಟಿವಿ ಆ್ಯಪ್‌ ಡೌನ್ಲೋಡ್ ಮಾಡಿ ಸಾಕು, ಮತ್ತು ನಿಮ್ಮ ಡಿಶ್ ಟಿವಿ ಡಿಟಿಎಚ್ ರಿಚಾರ್ಜ್‌ಗೆ ಸುಲಭವಾಗಿ ಪಾವತಿಸಲು ಸಾಧ್ಯವಾಗುತ್ತದೆ.
ನನ್ನ ಡಿಶ್ ಟಿವಿ ಅಕೌಂಟಿಗೆ ನಾನು ಎಲ್ಲಿ ಉತ್ತಮ ರಿಚಾರ್ಜ್ ಆಫರ್‌ಗಳನ್ನು ಹುಡುಕಬಹುದು?
ಡಿಶ್ ಟಿವಿ ಗ್ರಾಹಕ ವೆಬ್‌ಸೈಟ್ ರಿಚಾರ್ಜ್ ಪೇಜ್, ಮೈ ಡಿಶ್ ಟಿವಿ ಮೊಬೈಲ್ ಆ್ಯಪ್ ಅಥವಾ ವಾಚೋ ಮೊಬೈಲ್ ಆ್ಯಪ್ ನಿಂದ ನಿಮ್ಮ ಡಿಶ್ ಟಿವಿ ಅಕೌಂಟ್ ಅನ್ನು ರಿಚಾರ್ಜ್ ಮಾಡುವಾಗ ನಿಮ್ಮ ಅಕೌಂಟ್‌ಗೆ ಕಸ್ಟಮೈಸ್ ಮಾಡಿದ ರಿಚಾರ್ಜ್ ಆಫರ್‌ಗಳನ್ನು ನೀವು ನೋಡಬಹುದು. ಪರ್ಯಾಯವಾಗಿ, ನೀವು 3 ನೇ ಪಾರ್ಟಿ ವಾಲೆಟ್ ಆ್ಯಪ್‌ಗಳಿಂದ (ಪೇಟಿಎಂ, ಮೊಬಿಕ್ವಿಕ್ ಮುಂತಾದವು) ರಿಚಾರ್ಜ್ ಮಾಡುವಾಗ ವಿವಿಧ ಕ್ಯಾಶ್‌ಬ್ಯಾಕ್ ಆಫರ್‌ಗಳನ್ನು ಪಡೆಯಬಹುದು. ಗ್ರಾಹಕರ ವೆಬ್‌ಸೈಟ್‌ನಲ್ಲಿ ರಿಚಾರ್ಜ್ ಪೇಜ್‌ನ ಕೆಳಭಾಗದಲ್ಲಿ ಚಾಲ್ತಿಯಲ್ಲಿರುವ 3ನೇ ಪಾರ್ಟಿ ಆಫರ್‌ಗಳ ಬಗ್ಗೆ ನೀವು ಮಾಹಿತಿ ಪಡೆಯಬಹುದು.
ನನ್ನ ಮಾಸಿಕ ರಿಚಾರ್ಜ್ ಮೊತ್ತವನ್ನು ನಾನು ಹೇಗೆ ಪರಿಶೀಲಿಸಬಹುದು?
ನೀವು ಡಿಶ್ ಟಿವಿ ಗ್ರಾಹಕರ ವೆಬ್‌ಸೈಟ್‌, ಮೈ ಡಿಶ್ ಟಿವಿ ಮೊಬೈಲ್ ಆ್ಯಪ್‌ ಅಥವಾ ವಾಚೊ ಮೊಬೈಲ್ ಆ್ಯಪ್‌ ಮೂಲಕ ರಿಚಾರ್ಜ್ ಮಾಡುವಾಗ, ರಿಚಾರ್ಜ್ ಜಾಗದಲ್ಲಿ ನಿಮ್ಮ ಮಾಸಿಕ ರಿಚಾರ್ಜ್ ಮೊತ್ತವನ್ನು ನಾವು ಸ್ವಯಂಚಾಲಿತವಾಗಿ ಭರ್ತಿ ಮಾಡುತ್ತೇವೆ. ಪರ್ಯಾಯವಾಗಿ, ನಿಮ್ಮ ಮಾಸಿಕ ರಿಚಾರ್ಜ್ ಮೊತ್ತವನ್ನು ಪರಿಶೀಲಿಸಲು ನೀವು ಡಿಶ್ ಟಿವಿ ಗ್ರಾಹಕ ವೆಬ್‌ಸೈಟ್ ಅಥವಾ ಮೈ ಡಿಶ್ ಟಿವಿ ಮೊಬೈಲ್ ಆ್ಯಪ್‌ನಲ್ಲಿ ನಿಮ್ಮ ಅಕೌಂಟ್‌ಗೆ ಲಾಗಿನ್ ಆಗಬಹುದು.
ನನ್ನ ಹಿಂದಿನ ರಿಚಾರ್ಜ್‌ಗಳ ವಿವರಗಳನ್ನು ನಾನು ಹೇಗೆ ಪರಿಶೀಲಿಸಬಹುದು?
ನೀವು ಡಿಶ್ ಟಿವಿ ಗ್ರಾಹಕರ ವೆಬ್‌ಸೈಟ್‌ನಲ್ಲಿ ನಿಮ್ಮ ಅಕೌಂಟ್‌ಗೆ ಲಾಗಿನ್ ಆಗಬಹುದು ಮತ್ತು ಎಡ ಪ್ಯಾನೆಲ್‌ನಲ್ಲಿನ ಪಾವತಿ ವಿವರಗಳು ವಿಭಾಗಕ್ಕೆ ಹೋಗಬಹುದು ಅಥವಾ ನೀವು ಮೈ ಡಿಶ್ ಟಿವಿ ಮೊಬೈಲ್ ಆ್ಯಪ್‌ನಲ್ಲಿ ರಿಚಾರ್ಜ್ ಸ್ಕ್ರೀನ್‌-> ಇತ್ತೀಚಿನ ಪಾವತಿಗಳಿಗೆ ಹೋಗಬಹುದು.
ನಾನು ತಪ್ಪಾದ ಅಕೌಂಟ್‌‌ಗೆ ರಿಚಾರ್ಜ್ ಮಾಡಿದ್ದೇನೆ, ಈಗ ನಾನು ಏನು ಮಾಡಲಿ?
ಯಾವ ತೊಂದರೆಯೂ ಇಲ್ಲ. ಇದನ್ನು ನಮಗೆ ವರದಿ ಮಾಡಲು ಈ ಹಂತಗಳನ್ನು ಅನುಸರಿಸಿ:
  • ಸ್ವ-ಸಹಾಯ ಕೇಂದ್ರಕ್ಕೆ ಹೋಗಿ
  • ಸಹಾಯ ವಿಭಾಗದಲ್ಲಿ ಪಾವತಿ ಮತ್ತು ಬಿಲ್ಲಿಂಗ್ ಸಂಬಂಧಿತ ಆಯ್ಕೆ ಮಾಡಿ-> ತಪ್ಪಾದ ವಿಸಿಗೆ ಮಾಡಿರುವ ಪಾವತಿ - ಮೊತ್ತ ವರ್ಗಾವಣೆ
  • ಅಗತ್ಯವಿರುವ ವಿವರಗಳೊಂದಿಗೆ ತೋರಿಸಲಾದ ಫಾರಂ ಭರ್ತಿ ಮಾಡಿ ಮತ್ತು ಸಲ್ಲಿಸಿ.
  • ನಾವು ನಿಮ್ಮನ್ನು ಸಂಪರ್ಕಿಸುತ್ತೇವೆ ಮತ್ತು ಶೀಘ್ರದಲ್ಲೇ ನಿಮ್ಮ ಸಮಸ್ಯೆಯನ್ನು ಪರಿಹರಿಸುತ್ತೇವೆ.
ನನ್ನ ರಿಚಾರ್ಜ್‌ಗೆ ನಾನು ಯಾವುದೇ ದೃಢೀಕರಣವನ್ನು ಪಡೆದಿಲ್ಲ, ಈಗ ನಾನೇನು ಮಾಡಬೇಕು?
ಕೆಲವೊಮ್ಮೆ ನೆಟ್ವರ್ಕ್ ದಟ್ಟಣೆಯ ಕಾರಣದಿಂದ ಎಸ್‌ಎಂಎಸ್ ಅಥವಾ ವಾಟ್ಸ್ಯಾಪ್ ದೃಢೀಕರಣ ತಡವಾಗುವುದರಿಂದ ಒಂದು ಗಂಟೆಯವರೆಗೆ ಕಾಯಿರಿ. ಈ ನಡುವೆ ನಿಮ್ಮ ಸೇವೆಗಳು ಮತ್ತೆ ಆರಂಭವಾಗಿವೆಯೇ ಎಂದು ಪರಿಶೀಲಿಸಿ. ನೀವು ಇನ್ನೂ ದೃಢೀಕರಣವನ್ನು ಪಡೆಯದಿದ್ದರೆ ಮತ್ತು ಸೇವೆ ಕೂಡಾ ಮರು ಆರಂಭವಾಗದಿದ್ದರೆ, ಈ ಹಂತಗಳನ್ನು ಅನುಸರಿಸಿ:
  • ಸ್ವಸಹಾಯ ಕೇಂದ್ರಕ್ಕೆ ಹೋಗಿ
  • ಸಹಾಯ ವಿಭಾಗದಲ್ಲಿ ಪಾವತಿ ಮತ್ತು ಬಿಲ್ಲಿಂಗ್ ಸಂಬಂಧಿತ- ಆನ್ಲೈನ್‌ನಲ್ಲಿ ರಿಚಾರ್ಜ್ ಮಾಡಲಾಗಿದೆ - ಡೀಲರ್ ಮೂಲಕ ಮೊತ್ತವನ್ನು ಪಡೆದಿಲ್ಲ ಅಥವಾ ರಿಚಾರ್ಜ್ ಮಾಡಲಾಗಿಲ್ಲ - ಮೊತ್ತವನ್ನು ಪಡೆದಿಲ್ಲ (ನಿಮ್ಮ ಪ್ರಕರಣದ ಪ್ರಕಾರ) ಆಯ್ಕೆ ಮಾಡಿ.
  • ಅಗತ್ಯವಿರುವ ವಿವರಗಳೊಂದಿಗೆ ತೋರಿಸಲಾದ ಫಾರಂ ಭರ್ತಿ ಮಾಡಿ ಮತ್ತು ಸಲ್ಲಿಸಿ.
  • ನಾವು ನಿಮ್ಮನ್ನು ಸಂಪರ್ಕಿಸುತ್ತೇವೆ ಮತ್ತು ಶೀಘ್ರದಲ್ಲೇ ನಿಮ್ಮ ಸಮಸ್ಯೆಯನ್ನು ಪರಿಹರಿಸುತ್ತೇವೆ.
ಅತ್ಯಂತ ಕಡಿಮೆಯ ಡಿಶ್ ಟಿವಿ ರಿಚಾರ್ಜ್ ಪ್ಲಾನ್ ಯಾವುದು?
ಹಲವಾರು ವೆಚ್ಚ-ಪರಿಣಾಮಕಾರಿ ಡಿಶ್ ಟಿವಿ ಡಿಟಿಎಚ್ ರಿಚಾರ್ಜ್ ಪ್ಲಾನ್‌ಗಳು ನಿಮ್ಮ ಆಯ್ಕೆಗೆ ಲಭ್ಯವಿವೆ. ಇದನ್ನು ಉದಾಹರಣೆಗೆ ತೆಗೆದುಕೊಳ್ಳಿ: ನೀವು ಆಯ್ಕೆ ಮಾಡಬಹುದಾದ ಅತ್ಯಂತ ಬೇಸಿಕ್ ಪ್ಯಾಕೇಜ್ ₹ 16 (ಎನ್‌ಸಿಎಫ್ ಮತ್ತು ತೆರಿಗೆಗಳು ಹೆಚ್ಚುವರಿ) ರ ಕ್ಲಾಸಿಕ್ ಹಿಂದಿ ಪ್ಯಾಕ್ ಆಗಿದೆ. ಇದು 8 (8) ಪೇ ಚಾನೆಲ್‌ಗಳನ್ನು ಹೊಂದಿದೆ. ಇನ್ನೂ ಹೆಚ್ಚು ಸಮಗ್ರವಾಗಿ ಹುಡುಕುತ್ತಿರುವವರು, 23 ಪೇ ಚಾನೆಲ್‌ಗಳನ್ನು ಹೊಂದಿರುವ ₹ 46 (ಎನ್‌ಸಿಎಫ್ ಮತ್ತು ತೆರಿಗೆಗಳು ಹೆಚ್ಚುವರಿ) ಮೌಲ್ಯದ ಭಾರತ್ ಪ್ರೈಮ್ ಪ್ಯಾಕ್ ಅನ್ನು ಆಯ್ಕೆ ಮಾಡಬಹುದು.
ನಾನು ಎಷ್ಟು ಕನಿಷ್ಠ ಮೊತ್ತಕ್ಕೆ ನನ್ನ ಡಿಶ್ ಟಿವಿ ಕನೆಕ್ಷನ್ ಅನ್ನು ರಿಚಾರ್ಜ್ ಮಾಡಬಹುದು?
  • ಡಿಶ್ ಟಿವಿ ಸಬ್‌ಸ್ಕ್ರೈಬರ್‌ಗಳಿಗೆ ಇರುವ ಕನಿಷ್ಠ ರಿಚಾರ್ಜ್ ಮೊತ್ತ ₹100
ಡಿಶ್ ಟಿವಿ ಕನೆಕ್ಷನ್ ಮೂಲಕ ನಾನು ತಕ್ಷಣ ರಿಚಾರ್ಜ್ ಮಾಡಲು ಸಾಧ್ಯವಾಗಿಲ್ಲ. ಸ್ವಿಚ್-ಆಫ್ ದಿನಾಂಕದಲ್ಲಿ ನಾನು ವಿಸ್ತರಣೆಯನ್ನು ಪಡೆಯಬಹುದೇ?
ಹೌದು, ನಿಮ್ಮ ಡಿಶ್ ಟಿವಿ ಕನೆಕ್ಷನ್ ಅನ್ನು ರಿಚಾರ್ಜ್ ಮಾಡಲು ನಿಮಗೆ ಸಾಧ್ಯವಾಗದಿದ್ದರೆ ನಿಮ್ಮ ಸ್ವಿಚ್-ಆಫ್ ದಿನಾಂಕದಲ್ಲಿ ನೀವು 3 ದಿನದ ವಿಸ್ತರಣೆಯನ್ನು ಪಡೆಯಬಹುದು. ಇದಕ್ಕಾಗಿ, ನೀವು ನಮ್ಮ "ನಂತರ ಪಾವತಿಸಿ" ಸೇವೆಯನ್ನು ಆಯ್ಕೆ ಮಾಡಬಹುದು. ಈ ಸೇವೆಯನ್ನು ಆಯ್ಕೆ ಮಾಡುವ ಮೂಲಕ, ನಿಮ್ಮ ಸೇವೆಗಳನ್ನು ಹೆಚ್ಚುವರಿ 3 ದಿನಗಳವರೆಗೆ ನಿಲ್ಲಿಸುವುದಿಲ್ಲ ಮತ್ತು ಈ ಸಮಯದಲ್ಲಿ ನೀವು ನಿಮ್ಮ ಅಕೌಂಟ್ ರಿಚಾರ್ಜ್ ಮಾಡಬಹುದು.
ನಂತರ ಪಾವತಿಸುವ ಸೇವೆಗೆ ಪಾವತಿಸಬೇಕಾದ ಶುಲ್ಕಗಳು ಎಷ್ಟು?
ನಾಮಮಾತ್ರದ ಮಾಸಿಕ ಸಬ್‌ಸ್ಕ್ರಿಪ್ಷನ್ ಶುಲ್ಕ ₹ 10 ಆಗಿದೆ. ಇದಕ್ಕಿಂತ ಹೆಚ್ಚುವರಿಯಾಗಿ, ನಿಮ್ಮ ಸಿಂಗಲ್ ಡೇ ಸಬ್‌ಸ್ಕ್ರಿಪ್ಷನ್ ಶುಲ್ಕಕ್ಕೆ (ನೀವು ಆಯ್ಕೆ ಮಾಡಿದ ಪ್ಯಾಕ್ ಪ್ರಕಾರ) ಸಮನಾದ ಮೊತ್ತವನ್ನು ವಿಧಿಸಲಾಗುತ್ತದೆ. ಈ ಉದಾಹರಣೆಯನ್ನು ಗಮನಿಸಿ: ನಿಮ್ಮ ಮಾಸಿಕ ರಿಚಾರ್ಜ್ ಮೊತ್ತ ₹300 ಆಗಿದ್ದರೆ. 1 ದಿನಕ್ಕೆ ನಂತರ ಪಾವತಿಸುವ ಸೇವೆಯನ್ನು ನಡೆಸಲು ನಿಮಗೆ ₹300/30 ದಿನಗಳು = ₹10 ಶುಲ್ಕ ವಿಧಿಸಲಾಗುತ್ತದೆ. ಆದ್ದರಿಂದ, ನೀವು 3 ದಿನಗಳವರೆಗೆ ನಂತರ ಪಾವತಿಸಿ ಸೇವೆ ಬಳಸಿದರೆ, ಅದು ₹10 x 3 ದಿನಗಳು = ₹30 ಪ್ಲಸ್ ಮಾಸಿಕ ಸೇವಾ ಸಬ್‌ಸ್ಕ್ರಿಪ್ಷನ್ ಮೊತ್ತ ₹10 ಆಗುತ್ತದೆ. ಹೀಗಾಗಿ ನಿಮಗೆ ವಿಧಿಸುವ ಒಟ್ಟು ಶುಲ್ಕ ₹30 + ₹10 = ₹40.
ಒಂದುವೇಳೆ ಡಿ-ಆ್ಯಕ್ಟಿವೇಶನ್ ನಂತರ ನಾನು ಕನೆಕ್ಷನ್ ಅನ್ನು ರಿಚಾರ್ಜ್ ಮಾಡಿದರೆ ಮತ್ತು ನಂತರ ಪಾವತಿಸುವ ಸೇವೆಯನ್ನು ನಾನು ಪಡೆದಿಲ್ಲವಾದರೆ, ನಾನು ಯಾವುದಾದರೂ ಶುಲ್ಕಗಳನ್ನು ಪಾವತಿಸಬೇಕೇ?
ಗಡುವು ದಿನಾಂಕದವರೆಗೆ ಸಬ್‍ಸ್ಕ್ರಿಪ್ಷನ್ ಶುಲ್ಕವನ್ನು ಪಾವತಿಸದೇ ಇದ್ದು, ನಿಮ್ಮ ಅಕೌಂಟನ್ನು ನಿಷ್ಕ್ರಿಯಗೊಳಿಸಲಾಗಿದ್ದರೆ ಅದರ ನಂತರ 3 ದಿನಗಳಲ್ಲಿ ನೀವು ರಿಚಾರ್ಜ್ ಮಾಡಿದರೆ ಯಾವುದೇ ಹೆಚ್ಚುವರಿ ಮೊತ್ತವನ್ನು ನಿಮಗೆ ಶುಲ್ಕವಾಗಿ ವಿಧಿಸಲಾಗುವುದಿಲ್ಲ. 3 ದಿನಗಳ ನಂತರ, ನಿಮಗೆ ನಾಮಮಾತ್ರದ ಶುಲ್ಕ ₹ 25 ವಿಧಿಸಲಾಗುತ್ತದೆ. ಇದು ಡಿ-ಆ್ಯಕ್ಟಿವ್ ಆಗಿದ್ದಾಗ ನಿಮ್ಮ ಕನೆಕ್ಷನ್ ಅನ್ನು ನಿರ್ವಹಿಸುವ ವೆಚ್ಚವನ್ನು ಕವರ್ ಮಾಡಲು ನಮಗೆ ಸಹಾಯ ಮಾಡುತ್ತದೆ.
ನಾನು ನನ್ನ ಮನೆ ಬದಲಾಯಿಸುತ್ತಿದ್ದರೆ ಅಥವಾ ಇನ್ನೊಂದು ನಗರ/ ಪಟ್ಟಣಕ್ಕೆ ವರ್ಗಾವಣೆಯಾಗುತ್ತಿದ್ದರೆ ನನ್ನ ಡಿಶ್ ಟಿವಿಯನ್ನು ಹೇಗೆ ಸಾಗಿಸಬಹುದು?
ಹೌದು, ನೀವು ಈ ಉಪಕರಣವನ್ನು ಭಾರತದಲ್ಲಿ ಎಲ್ಲಿಗೆ ಬೇಕಾದರೂ ತೆಗೆದುಕೊಂಡು ಹೋಗಬಹುದು. ಹೆಚ್ಚಿನ ಸಹಾಯಕ್ಕಾಗಿ ದಯವಿಟ್ಟು bit.ly/3wfXfRo ಮೇಲೆ ಕ್ಲಿಕ್ ಮಾಡಿ.
ರಿಸೆಪ್ಶನ್ ಗುಣಮಟ್ಟಕ್ಕೆ ಏನಾದರೂ ಅಡ್ಡಿಗಳಿವೆಯೇ? ಉದಾಹರಣೆಗೆ, ಭಾರೀ ಮಳೆ?
ಭಾರೀ ಮಳೆಯಂತಹ ಹವಾಮಾನದ ಪರಿಸ್ಥಿತಿಗಳಲ್ಲಿ ಅಥವಾ ಸ್ಯಾಟಲೈಟ್‌ ಮತ್ತು ಭೂಮಿಯ ಸಾಲಿನಲ್ಲಿ ಸೂರ್ಯನು ಬಂದಾಗ ಕೆಲವು ನಿಮಿಷಗಳ ನಿಲುಗಡೆ ಸಂಭವಿಸಬಹುದು. ಇದನ್ನು ರೈನ್ ಔಟೇಜ್/ ಸನ್ ಔಟೇಜ್ ಎಂದು ಕರೆಯಲಾಗುತ್ತದೆ ಮತ್ತು ಇದು ವಿಶ್ವದಾದ್ಯಂತ ಇರುವ ಡಿಟಿಎಚ್ ವೇದಿಕೆಗಳಲ್ಲಿ ಕಂಡುಬರುತ್ತದೆ. ಇದು ಸಾಮಾನ್ಯವಾಗಿ ಒಂದು ವರ್ಷದಲ್ಲಿ ಒಂದು ಅಥವಾ ಎರಡು ನಿಮಿಷಗಳ ಕಾಲ ಬರುತ್ತದೆ, ಹಾಗೂ ಇದನ್ನು ತಂತಾನೇ ಪತ್ತೆಹಚ್ಚುವುದರಿಂದ ಈ ಔಟೇಜ್ ತಾನಾಗಿಯೇ ಸರಿಯಾಗುತ್ತದೆ.
ನನ್ನ ಡಿಶ್ ಟಿವಿ ಕನೆಕ್ಷನ್ನಿನಲ್ಲಿ ಏನಾದರೂ ತೊಂದರೆಯಾದಲ್ಲಿ ನಾನು ಯಾರನ್ನು ಸಂಪರ್ಕಿಸಬೇಕು?
ನಿಮ್ಮ ಡಿಶ್ ಟಿವಿ ಅಕೌಂಟ್‌ಗೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳು ಅಥವಾ ಸಮಸ್ಯೆಗಳಿಗೆ 95017-95017 ಗೆ ಕರೆ ಮಾಡಿ ಅಥವಾ ಈ ಕೆಳಗಿನ ಸರಳ ಹಂತಗಳನ್ನು ಅನುಸರಿಸುವ ಮೂಲಕ ನೀವೇ ಪರಿಹರಿಸಿ. ನಿಮ್ಮ ಹತ್ತಿರದ ಡಿಶ್ ಕೇರ್ ಸೆಂಟರ್‌ಗೆ ಕೂಡ ನೀವು ಕರೆ ಮಾಡಬಹುದು.
ದೋಷಯುಕ್ತ ಸೆಟ್-ಟಾಪ್-ಬಾಕ್ಸ್ ಸಂದರ್ಭದಲ್ಲಿ, ಸೆಟ್-ಟಾಪ್-ಬಾಕ್ಸ್ ಬದಲಿ ಪಾಲಿಸಿ ಎಂದರೇನು?
ಹಾಳಾದ ಸೆಟ್-ಟಾಪ್-ಬಾಕ್ಸ್ ಬದಲಾಯಿಸಲು ಶುಲ್ಕಗಳು:

₹ 250 ಬಾಕ್ಸ್ ಸ್ವ್ಯಾಪ್ ಶುಲ್ಕಗಳು (ಸೆಟ್-ಟಾಪ್-ಬಾಕ್ಸ್ ವಾರಂಟಿ ಅವಧಿ ಮೀರಿದ್ದರೆ) + ₹ 200 ಟೆಕ್ನಿಶಿಯನ್ ಭೇಟಿ ಶುಲ್ಕಗಳು (ಒಂದು ವೇಳೆ ಟೆಕ್ನಿಶಿಯನ್ ಭೇಟಿಯು ವಾರಂಟಿ ಅವಧಿಯ ಹೊರಗಿದ್ದರೆ) + ಹಾರ್ಡ್‌ವೇರ್ ಶುಲ್ಕಗಳು (ಯಾವುದಾದರೂ ಇದ್ದರೆ)


Dish SMRT ಹಬ್ ಬಾಕ್ಸ್ ಸ್ವ್ಯಾಪ್ ಶುಲ್ಕಗಳು:

₹ 700 ಬಾಕ್ಸ್ ಸ್ವ್ಯಾಪ್ ಶುಲ್ಕಗಳು (ಸೆಟ್-ಟಾಪ್-ಬಾಕ್ಸ್ ವಾರಂಟಿ ಅವಧಿ ಮೀರಿದ್ದರೆ) + ₹ 200 ಟೆಕ್ನಿಶಿಯನ್ ಭೇಟಿ ಶುಲ್ಕಗಳು (ಒಂದು ವೇಳೆ ಟೆಕ್ನಿಶಿಯನ್ ಭೇಟಿಯು ವಾರಂಟಿ ಅವಧಿಯ ಹೊರಗಿದ್ದರೆ) + ಹಾರ್ಡ್‌ವೇರ್ ಶುಲ್ಕಗಳು (ಯಾವುದಾದರೂ ಇದ್ದರೆ)


ಬದಲಾವಣೆ ಮಾಡಿದ/ರಿಪೇರಿ ಮಾಡಲಾದ ಸೆಟ್ ಟಾಪ್ ಬಾಕ್ಸ್ ಮೇಲೆ 180 ದಿನಗಳ ವಾರಂಟಿಯಲ್ಲಿ ಸೆಟ್ ಟಾಪ್ ಬಾಕ್ಸ್ ಬದಲಾವಣೆ/ಸ್ವಾಪ್ ಸಂದರ್ಭದಲ್ಲಿ ಸಬ್‌‌ಸ್ಕ್ರೈಬರ್‌‌ಗೆ ರಿಪೇರಿ ಮಾಡಲಾದ ಸೆಟ್ ಟಾಪ್ ಬಾಕ್ಸನ್ನು ಒದಗಿಸಲಾಗುವುದು.
ವೀವಿಂಗ್ ಕಾರ್ಡ್ ಎಂದರೇನು?
ವೀವಿಂಗ್ ಕಾರ್ಡ್ ಎಂಬುದು ಒಂದು ಕ್ರೆಡಿಟ್ ಕಾರ್ಡ್ ಗಾತ್ರದ ಸ್ಮಾರ್ಟ್ ಕಾರ್ಡ್ ಆಗಿದ್ದು, ಇದರಲ್ಲಿ ಗ್ರಾಹಕರು ಸಬ್‍ಸ್ಕ್ರೈಬ್ ಮಾಡಿರುವ ಚಾನೆಲ್‍ಗಳ ಮಾಹಿತಿ ಇರುತ್ತದೆ. ಇದನ್ನು ಸೆಟ್-ಟಾಪ್ ಬಾಕ್ಸಿನಲ್ಲಿ ಒಳಸೇರಿಸಿದಾಗ ಇದರಿಂದ ಸಬ್‍ಸ್ಕ್ರೈಬರ್‌ ಆಯ್ಕೆ ಮಾಡಿದ ಚಾನೆಲ್‍ಗಳನ್ನು ನೋಡಲು ಸಾಧ್ಯವಾಗುತ್ತದೆ. ನೀವು ಈ ಕಾರ್ಡನ್ನು ಕಾಳಜಿ ವಹಿಸಿ ನೋಡಿಕೊಳ್ಳಬೇಕು ಮತ್ತು ಅದರ ಅನನ್ಯ ವಿಸಿ ನಂಬರನ್ನು ಸುರಕ್ಷಿತ ಸ್ಥಳದಲ್ಲಿಡಬೇಕು ಮತ್ತು ನಮ್ಮೊಂದಿಗಿನ ನಿಮ್ಮ ಪ್ರತಿಯೊಂದು ಸಂವಹನದಲ್ಲಿಯೂ ಇದನ್ನು ಉಲ್ಲೇಖಿಸಬೇಕು.
ನನ್ನ ವೀವಿಂಗ್ ಕಾರ್ಡನ್ನು ನಾನು ಕಳೆದುಕೊಂಡಿದ್ದೇನೆ/ ಹಾನಿಗೊಳಗಾಗಿದೆ. ನಾನು ಹೊಸದನ್ನು ಹೇಗೆ ಪಡೆಯಬಹುದು?
ರೂ. an1 ಮತ್ತೊಮ್ಮೆ ಪಾವತಿಸುವ ಮೂಲಕ ನೀವು ಡೀಲರಿಂದ ಹೊಸ ಕಾರ್ಡ್ ಪಡೆದುಕೊಳ್ಳುತ್ತೀರಿ ಮತ್ತು ನಿಮ್ಮ ಕಳೆದುಹೋದ/ಹಾನಿಗೊಳಗಾದ ವಿಸಿಯ ಡಿಪಾಸಿಟ್ಟನ್ನು ಕಳೆದುಕೊಳ್ಳುತ್ತೀರಿ.
ಯುನಿವರ್ಸಲ್ ರಿಮೋಟ್ ಎಂದರೇನು?
ಪರಿಚಯಿಸಲಾಗುತ್ತಿದೆ ಡಿಶ್ ಟಿವಿ ಯುನಿವರ್ಸಲ್ ರಿಮೋಟ್. ನಿಮ್ಮ ಸೆಟ್-ಟಾಪ್-ಬಾಕ್ಸ್ ಮತ್ತು ಟಿವಿ ಎರಡಕ್ಕೂ ಒಂದು ವೈವಿಧ್ಯಮಯ ಮತ್ತು ಜಂಜಡ ರಹಿತ ರಿಮೋಟ್. ನಯವಾದ, ಮ್ಯಾಟ್ ಪಿನಿಷ್ ವಿನ್ಯಾಸದಲ್ಲಿ ನೀಡಲಾಗಿದೆ. ಈ ರಿಮೋಟ್ ಎಲ್ಲಾ ಸ್ಯಾಮ್ಸಂಗ್ ಟಿವಿಗಳಿಗೆ ಮೊದಲೇ ಕಾನ್ಫಿಗರ್ ಆಗಿದೆ, ಮತ್ತು ಎಲ್ಲಾ ಇತರ ಬ್ರ್ಯಾಂಡ್ ಟಿವಿಗಳ ಜೊತೆಗೆ ಕಾರ್ಯನಿರ್ವಹಿಸುತ್ತದೆ. ಈಗ ಇದು ಮನರಂಜನೆ ಸುಲಭವಾಗಿದೆ.

* 2 AA ಬ್ಯಾಟರಿಗಳ ಅಗತ್ಯವಿದೆ
ನಿಮ್ಮ ಟಿವಿಯೊಂದಿಗೆ ಯೂನಿವರ್ಸಲ್ ರಿಮೋಟನ್ನು ಹೇಗೆ ಹೊಂದಿಸುವುದು?
ಟಿವಿ ಮೋಡ್ ಎಲ್ಇಡಿ ಕೆಂಪಾಗಿ ಬದಲಾಗುವವರೆಗೂ ಡಿಶ್ ಟಿವಿ ಯೂನಿವರ್ಸಲ್ ರಿಮೋಟಿನ ಓಕೆ ಬಟನ್ ಮತ್ತು 0 ಕೀಗಳನ್ನು ಒಟ್ಟಿಗೆ ಒತ್ತಿರಿ: ಇದು ರಿಮೋಟ್ ಕಲಿಯಲು ಸಿದ್ಧವಾಗಿದೆ ಎಂದು ತೋರಿಸುತ್ತದೆ.
ಡಿಶ್ ಟಿವಿ ಯುನಿವರ್ಸಲ್ ರಿಮೋಟನ್ನು ಸಮತಟ್ಟಾದ ಮೇಲ್ಮೈ ಮೇಲಿರಿಸಿ. ನಿಮ್ಮ ಟಿವಿ ರಿಮೋಟ್ ಮತ್ತು ಯುನಿವರ್ಸಲ್ ರಿಮೋಟ್ ಎಲ್ಇಡಿ ಲೈಟ್ ನೇರವಾಗಿ ಪರಸ್ಪರ ಎದುರು ಬದುರಾಗಿರುವಂತೆ ಇರಿಸಿ. ರಿಮೋಟ್‍ಗಳ ನಡುವಿನ ಅಂತರವು 5cm ಆಗಿರಬೇಕು.
ಯುನಿವರ್ಸಲ್ ರಿಮೋಟಿನ ಟಿವಿ ಪವರ್ ಬಟನನ್ನು ಪ್ರೋಗ್ರಾಮ್ ಮಾಡಲು, ಯುನಿವರ್ಸಲ್ ರಿಮೋಟಿನ ಟಿವಿ ಪವರ್ ಕೀಯನ್ನು ಒತ್ತಿರಿ. ನೀವು ಮುಂದುವರೆಸಬಹುದು ಎಂದು ಖಚಿತಪಡಿಸಲು ಡಿಶ್ ಟಿವಿ ರಿಮೋಟಿನ ಕೆಂಪು ಟಿವಿ ಮೋಡ್ ಎಲ್ಇಡಿ ಒಮ್ಮೆ ಮಿನುಗುತ್ತದೆ.
ಟಿವಿ ರಿಮೋಟಿನಲ್ಲಿ ಪವರ್ ಕೀಯನ್ನು ಒತ್ತಿರಿ. ಕಮಾಂಡ್ ತಿಳಿದುಕೊಂಡಿದೆಯೆಂದು ಖಚಿತಪಡಿಸಲು ಯುನಿವರ್ಸಲ್ ರಿಮೋಟಿನ ಕೆಂಪು ಟಿವಿ ಮೋಡ್ ಎಲ್ಇಡಿ ಎರಡು ಬಾರಿ ಮಿನುಗುತ್ತದೆ.
ವಾಲ್ಯೂಮ್ ಅಪ್/ಡೌನ್‌ಗಾಗಿಯೂ ನೀವು ಅದೇ ಪ್ರಕ್ರಿಯೆಯನ್ನು ಅನುಸರಿಸಬಹುದು. ಮ್ಯೂಟ್, ಸೋರ್ಸ್ & ನೇವಿಗೇಶನ್(ಅಪ್/ ಡೌನ್/ ಲೆಫ್ಟ್/ ರೈಟ್/ ಓಕೆ).
ಕಲಿತ ಕಮಾಂಡ್‌ಗಳನ್ನು ಸೇವ್ ಮಾಡಲು, ಕೆಂಪು ಟಿವಿ ಮೋಡ್ ಎಲ್ಇಡಿ ಮೂರು ಬಾರಿ ಮಿನುಗುವರೆಗೂ ಯುನಿವರ್ಸಲ್ ರಿಮೋಟಿನಲ್ಲಿ ಟಿವಿ ಪವರ್ ಕೀಯನ್ನು ಒತ್ತಿ.
ಯುಪಿಐ ಮೂಲಕ ರೀಚಾರ್ಜ್
ದೇಶದಲ್ಲಿ ನಗದುರಹಿತ ಟ್ರಾನ್ಸಾಕ್ಷನ್‌ಗಳನ್ನು ಪ್ರೋತ್ಸಾಹಿಸಲು, ಡಿಶ್ ಟಿವಿ ಸಬ್‍ಸ್ಕ್ರೈಬರ್‌ ಯಾವುದೇ ಒಗ್ಗೂಡಿಸಿದ ಪಾವತಿ ಇಂಟರ್ಫೇಸ್ ಆ್ಯಪ್ ಮೂಲಕ (ಭಾರತದ ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಪ್ರಾರಂಭಿಸಿದ ಏಕ ಗವಾಕ್ಷಿ ಮೊಬೈಲ್ ಪಾವತಿ ವ್ಯವಸ್ಥೆ) ಅಥವಾ ಅಸಂಘಟಿತ ಪೂರಕ ಸೇವೆ ಡೇಟಾ (ಯುಎಸ್ಎಸ್‍ಡಿ) ಮೂಲಕ ತಮ್ಮ ಸಬ್‍ಸ್ಕ್ರಿಪ್ಷನನ್ನು ಈಗ ರೀಚಾರ್ಜ್ ಮಾಡಬಹುದು.

ನಿಮ್ಮ ಡಿಶ್ ಟಿವಿ ಸಬ್‍ಸ್ಕ್ರಿಪ್ಷನನ್ನು ಯುಪಿಐ ಅಥವಾ ಯುಎಸ್ಎಸ್‍ಡಿ ಮೂಲಕ ರೀಚಾರ್ಜ್ ಮಾಡಲು ನೀವು ಅನುಸರಿಸಬಹುದಾದ ಹಂತಗಳು ಹೀಗಿವೆ:

ಆ್ಯಪ್:

  • ಹಂತ 1: ಆ್ಯಪ್ ಸ್ಟೋರ್ ಅಥವಾ ಪ್ಲೇ ಸ್ಟೋರಿನಿಂದ ಭೀಮ್ /ಐಸಿಐಸಿಐ ಪಾಕೆಟ್, ಮುಂತಾದ ಯಾವುದೇ ಯುಪಿಐ ಆ್ಯಪನ್ನು ಡೌನ್ಲೋಡ್ ಮಾಡಿ.
  • ಹಂತ 2: ನಿಮ್ಮ ಅನನ್ಯ ಪಿನ್ ಅನ್ನು ರಚಿಸಿ ಮತ್ತು ನೋಂದಾಯಿಸಿ.
  • ಹಂತ 3: ನಿಮ್ಮ ಆ್ಯಪಿನಲ್ಲಿ ಯುಪಿಐ ಟ್ಯಾಬ್/ಐಕಾನ್ ಕ್ಲಿಕ್ ಮಾಡಿ.
  • ಹಂತ 4: ಕಳುಹಿಸಿ/ಪಾವತಿಸಿ ಟ್ಯಾಬ್ ಕ್ಲಿಕ್ ಮಾಡಿ.
  • ಹಂತ 5: ಪೇಮೆಂಟ್ ಅಡ್ರೆಸ್ ನಮೂದಿಸಿ, ಅದು ಡಿಶ್ ಟಿವಿ ಆಗಿರುತ್ತದೆ. ನಿಮ್ಮ ಟ್ರಾನ್ಸಾಕ್ಷನ್ ಪೂರ್ಣಗೊಳಿಸಲು <vc number>@icici.
ಆನ್ಲೈನಿನಲ್ಲಿ ರಿಚಾರ್ಜ್ ಮಾಡಿ
ಈಗ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮತ್ತು ನೆಟ್ ಬ್ಯಾಂಕಿಂಗ್ ಬಳಸಿಕೊಂಡು ನಿಮ್ಮ ಡಿಶ್ ಟಿವಿ ಸಬ್‍ಸ್ಕ್ರಿಪ್ಷನನ್ನು ತಕ್ಷಣ ರೀಚಾರ್ಜ್ ಮಾಡಿ. ನೀವು ವಾಲೆಟ್ ಮತ್ತು ಯುಪಿಐ ಸಕ್ರಿಯ ಆ್ಯಪ್‌ಗಳಿಂದಲೂ ಪಾವತಿ ಮಾಡಬಹುದು.ಗೂಗಲ್ ಪ್ಲೇಸ್ಟೋರಿನಿಂದ ಡಿಶ್ ಟಿವಿ ಆ್ಯಪನ್ನು ಡೌನ್ಲೋಡ್ ಮಾಡಿ ಮತ್ತು ನಿಮ್ಮ ಬಿಲ್‍ಗಳನ್ನು ತಕ್ಷಣ ಪಾವತಿಸಿ.

ಈಗ ರಿಚಾರ್ಜ್ ಮಾಡಿ

ಡಿಶ್ ಟಿವಿ ಹೋಮ್ ಪಿಕ್
ನಿಮ್ಮ ಮನೆ ಬಾಗಿಲಿನಲ್ಲಿ ಡಿಶ್ ಟಿವಿ ರೀಚಾರ್ಜ್ ತೆಗೆದುಕೊಳ್ಳುವಂತೆ ಮಾಡಿ. ಈ ಸೇವೆಯನ್ನು ಪಡೆಯಲು ಕೇವಲ < DISHTV HOME PICK > ಎಂದು <57575> ಗೆ ನಿಮ್ಮ ನೊಂದಾಯಿತ ಮೊಬೈಲ್ ನಂಬರಿನಿಂದ ಎಸ್ಎಂಎಸ್ ಮಾಡಿ. ಈ ಸೇವೆಯನ್ನು ಪಡೆಯಲು ಕನಿಷ್ಠ ರೀಚಾರ್ಜ್ ಮೊತ್ತ ರೂ. 1500/-.

*ಈ ಸೇವೆಯು ಆಯ್ದ ನಗರಗಳಲ್ಲಿ ಲಭ್ಯವಿದೆ, ಹೆಚ್ಚಿನ ಸಹಾಯಕ್ಕಾಗಿ ದಯವಿಟ್ಟು 95017-95017 ಗೆ ಕರೆ ಮಾಡಿ

ಡೀಲರ್ ಮೂಲಕ ರೀಚಾರ್ಜ್ ಮಾಡಿ

ನಿಮ್ಮ ಹತ್ತಿರದ ಡಿಶ್ ಟಿವಿ ಡೀಲರನ್ನು ಭೇಟಿ ಮಾಡಿ ಮತ್ತು ನಿಮ್ಮ ಕನೆಕ್ಷನ್ ರೀಚಾರ್ಜ್ ಮಾಡಿ. ಕೆಳಗಿನವುಗಳಲ್ಲಿ ಯಾವುದಾದರೂ ಒಂದರಿಂದ ನೀವು ಆಯ್ಕೆ ಮಾಡಬಹುದು:

ಡಿಶ್ ಟಿವಿ ಡೀಲರ್ ಲೊಕೇಟರ್ ನಿಮ್ಮ ಹತ್ತಿರದ ಡಿಶ್ ಟಿವಿ ಡೀಲರನ್ನು ಭೇಟಿ ಮಾಡಿ ಮತ್ತು ನಿಮ್ಮ ಡಿಶ್ ಟಿವಿ ಕನೆಕ್ಷನನ್ನು ರೀಚಾರ್ಜ್ ಮಾಡಲು ನಗದು ಪಾವತಿ ಮಾಡಿ. ಡಿಶ್‌ಟಿವಿ ಡೀಲರನ್ನು ಪತ್ತೆ ಮಾಡಿ
ಆಕ್ಸಿಜೆನ್ ನಿಮ್ಮ ಹತ್ತಿರದ ಆಕ್ಸಿಜನ್ ಸ್ಟೋರ್‌ಗೆ ಭೇಟಿ ನೀಡಿ ಮತ್ತು ನಿಮ್ಮ ಡಿಶ್‌ಟಿವಿ ಸಂಪರ್ಕವನ್ನು ಪುನಃ ಚಾರ್ಜ್ ಮಾಡಲು ಕ್ಯಾಶ್ ಪೇಮೆಂಟ್ ಮಾಡಿ.
ಭೂಪಾಲಮ್ ಕರ್ನಾಟಕದ ಗ್ರಾಹಕರು ಹತ್ತಿರದ ಭೂಪಾಲಮ್ ಔಟ್ಲೆಟ್‍ನಲ್ಲಿ ತಮ್ಮ ಡಿಶ್ ಟಿವಿ ಕನೆಕ್ಷನ್ ರಿಚಾರ್ಜ್ ಮಾಡಬಹುದು.
*GST EXTRA. Terms and Conditions apply.
**ರೆಕಾರ್ಡಿಂಗ್ ಫೀಚರ್ D-7000 HD ಮಾಡೆಲ್‌ನಲ್ಲಿ ಮಾತ್ರ ಲಭ್ಯವಿರುತ್ತದೆ.

ನಿಮ್ಮ ಪ್ಯಾಕೇಜ್ ಬಗ್ಗೆ ತಿಳಿಯಿರಿ

ಬನ್ನಿ ಆರಂಭಿಸೋಣ.
ಅಥವಾ

ನಿಮ್ಮ ದೂರಿನ ಸ್ಥಿತಿಯನ್ನು ತಿಳಿಯಿರಿ

ಬನ್ನಿ ಆರಂಭಿಸೋಣ.

ನಿಮ್ಮ ಸಬ್‌ಸ್ಕ್ರೈಬ್ ಮಾಡಿದ ಪ್ಲಾನ್

ಸಿನಿ ಆ್ಯಕ್ಟಿವ್ಸ್ಟಾರ್ ಸ್ಪೋರ್ಟ್ಸ್ 1ಸ್ಟಾರ್ ಸ್ಪೋರ್ಟ್ಸ್ 1 ಹಿಂದಿಜೀ ಟಿವಿಇಂಟ್ರಡಕ್ಟರಿ ವ್ಯಾಲ್ಯೂ ಕಾಂಬೋ 3 ತಿಂಗಳ ಆಫರ್ ಪ್ಯಾಕ್_ಆಗಸ್ಟ್ 20

ಮೇಲಕ್ಕೆ ಸ್ಕ್ರೋಲ್ ಮಾಡಿ