Download DishTV App to Avail App Only Cashback Offers, One-Tap Recharge & Lot More!
Recharge, Manage your Account & Explore Exciting Offers!
close
DTH India, Digital TV, DTH Services| Dish TV
  • ತ್ವರಿತ ರೀಚಾರ್ಜ್

  • New Connection ಹೊಸ ಕನೆಕ್ಷನ್
  • Need Help ಸಹಾಯ ಪಡೆಯಿರಿ
  • My Account ಲಾಗಿನ್‌
    My Account ನನ್ನ ಅಕೌಂಟ್
    Manage Your Packs ನಿಮ್ಮ ಪ್ಯಾಕ್‌ಗಳನ್ನು ನಿರ್ವಹಿಸಿ
    Self Help ಸ್ವಸಹಾಯ
    Complaint Tracking ದೂರು ಟ್ರ್ಯಾಕಿಂಗ್
Instant Recharge
Manage your account
Access Control Guide
Quick Fix
Transaction History
Exclusive Offers

ನಿಮ್ಮ ಡಿಶ್‌ಟಿವಿ ಆಂಡ್ರಾಯ್ಡ್ ಮೊಬೈಲ್ ಆ್ಯಪ್‌ ಏನು ಮಾಡಬಲ್ಲದು?

ತ್ವರಿತ ರೀಚಾರ್ಜ್
ಕೇವಲ ಒಂದು ಟ್ಯಾಪ್ ಮೂಲಕ ಯಾವುದೇ ಸಮಯದಲ್ಲಿ ಎಲ್ಲಿಂದ ಬೇಕಾದರೂ ರಿಚಾರ್ಜ್ ಮಾಡಿ. ಹಲವು ಪಾವತಿ ವಿಧಾನಗಳು ಮತ್ತು ವಿಶೇಷ ಆಫರ್‌ಗಳ ವ್ಯಾಪಕ ಆಯ್ಕೆ.
ನಿಮ್ಮ ಅಕೌಂಟನ್ನು ನಿರ್ವಹಿಸಿ
ಕೆಲವೇ ಟ್ಯಾಪ್ ಮೂಲಕ ನಿಮ್ಮ ಪ್ಯಾಕಿನಲ್ಲಿ ಬದಲಾವಣೆ ಮಾಡಿ ಅಥವಾ ಹೆಚ್ಚುವರಿ ಚಾನೆಲ್/ಸರ್ವಿಸ್‌ಗಳನ್ನು ಸೇರಿಸಿ.
ಚಾನೆಲ್‍ ಗೈಡ್
ನಿಮ್ಮ ಮೆಚ್ಚಿನ ಕಾರ್ಯಕ್ರಮ ಯಾವಾಗ ಪ್ರಸಾರವಾಗುತ್ತದೆ ಎಂದು ನೋಡಿ ಮತ್ತು ಅದಕ್ಕೆ ರಿಮೈಂಡರ್ ಸೆಟ್ ಮಾಡಿ. ಚಾನೆಲ್‌ಗಳನ್ನು ಮೆಚ್ಚಿನವುಗಳಾಗಿ ಸೆಟ್ ಮಾಡಿ.
ತ್ವರಿತ ಪರಿಹಾರಗಳು
ಹೊಸದಾಗಿ ಸೇರಿಸಲಾದ ಎಡಿಐ ಚಾಟ್‌ಬಾಟ್ ಮೂಲಕ My DishTV ಆ್ಯಪಿನೊಂದಿಗೆ ಮಾತನಾಡಿ. ಎಡಿಐ ಗೆ ನಿಮ್ಮ ಡಿಶ್‌ಟಿವಿ ಸಂಬಂಧಿತ ತೊಂದರೆಗಳನ್ನು ಹೇಳಿ ಮತ್ತು ಆ ಕೂಡಲೇ ಪರಿಹಾರ ಪಡೆಯಿರಿ.
ಟ್ರಾನ್ಸಾಕ್ಷನ್‌ ಹಿಸ್ಟರಿ
ನಿಮ್ಮ ಹಳೆಯ ರಿಚಾರ್ಜ್‌ಗಳನ್ನು ನೋಡಿ ಅಥವಾ ಇನ್ವಾಯ್ಸ್‌ಗಳನ್ನು ಡೌನ್ಲೋಡ್ ಮಾಡಿ
ಇನ್ಫ್ರಾರೆಡ್ ರಿಮೋಟ್
ನಿಮ್ಮ ಡಿಶ್‌ಟಿವಿ ಸೆಟ್ ಟಾಪ್ ಬಾಕ್ಸಿನ ಜೊತೆಗಾರ: ಈಗ ನೀವು ಹೊಸ ಇನ್ಫ್ರಾರೆಡ್ ರಿಮೋಟ್ ಫೀಚರ್‌ಗಳ ಮೂಲಕ ನಿಮ್ಮ ಡಿಶ್‌ಟಿವಿ ಸೆಟ್ ಟಾಪ್ ಬಾಕ್ಸನ್ನು ನಿಯಂತ್ರಿಸಿ.

*ಇನ್ಫ್ರಾರೆಡ್ ಟ್ರಾನ್ಸ್‌ಮಿಟ್ಟರ್ ಇರುವ ಡಿವೈಸ್‌ಗಳಿಗೆ ಮಾತ್ರ. ನಿಮ್ಮ ಡಿವೈಸ್ ತಯಾರಕರಲ್ಲಿ ಪರೀಕ್ಷಿಸಿ.

- ಪ್ರೇಮ್ ರಾವಲ್
New Improved App…
- ಪ್ರದೀಪ್ ಕುಮಾರ್
Very good and user friendly app.
- ದೀಪಂಕರ್ ಭಟ್ಟಾಚರ್ಯ
This app has transformed into an exceptional app, Remote feature is such a useful thing.Keep it up…
- ಪ್ರಸಾದ್ ಎಲ್ಚುರಿ
All DishTV info at hand. Easy to recharge
- ಪ್ಯಾರಿ ವಾಲಿಯಾ
Very good app, no need to call at the help care center u can modify your pack, refresh your dish, instant recharge etc., Great app
- ಮ್ಯಾಂಡಿ ಸಂಧು
This app is becoming more popular, useful and informative. The new addition of channel guide is awsome.
- ಶಂಶೇರ್ ಠಾಕೂರ್
Cool and efficient with a user friendly interface. Quick customer support.

ಆಗಾಗ್ಗೆ ಕೇಳಲಾಗುವ ಪ್ರಶ್ನೆಗಳು ​

ಆ್ಯಪ್‌ ನನಗೆ ಹೇಗೆ ಸಹಾಯ ಮಾಡುತ್ತದೆ?

ಮೈ ಡಿಶ್‌ಟಿವಿ ಆ್ಯಪ್‌ ನಿಮ್ಮ ಡಿಶ್‌ಟಿವಿ ಖಾತೆಗೆ 24 x 7 ಅಕ್ಸೆಸನ್ನು ಒದಗಿಸುತ್ತದೆ. ಅಕೌಂಟಿನ ಎಲ್ಲಾ ಮಾಹಿತಿಯನ್ನು ಒಂದು ಟ್ಯಾಪಿನಲ್ಲಿ ಮತ್ತು ಬೇರೆ ಎಲ್ಲಾ ಕೆಲಸಗಳನ್ನು 3 ಟ್ಯಾಪ್‌ಗಳಲ್ಲಿ ಅಕ್ಸೆಸ್ ಮಾಡಬಹುದು. ತಕ್ಷಣದ ರಿಚಾರ್ಜ್, ಅಕೌಂಟ್ ನಿರ್ವಹಣೆ ಮತ್ತು ಟ್ರಾನ್ಸಾಕ್ಷನ್ ಹಿಸ್ಟರಿಗಳಂತಹ ಫೀಚರ್‌ಗಳಿಗಾಗಿ, ಸಾಮಾನ್ಯ ಮಾಹಿತಿ ಮತ್ತು ಸಾಮನ್ಯ ತೊಂದರೆಗಳಿಗಾಗಿ ಕರೆ ಮಾಡುವ ಅಗತ್ಯವಿಲ್ಲ.

ಆ್ಯಪ್‌ನಲ್ಲಿ ಕಂಡುಬರುವ ವಿವಿಧ ಫೀಚರ್‌ಗಳು/ವಿಭಾಗಗಳು ಯಾವವು

ಆ್ಯಪ್‌ನಲ್ಲಿ ಕಂಡುಬರುವ ವಿವಿಧ ವಿಭಾಗಗಳು/ಫೀಚರ್‌ಗಳು ಈ ಕೆಳಗಿನಂತಿವೆ:

  • ತ್ವರಿತ ರೀಚಾರ್ಜ್: ಯುಪಿಐ ಮತ್ತು ವಾಲೆಟ್‌ಗಳನ್ನು ಸೇರಿಸಿ ಹಲವಾರು ಪಾವತಿ ಮೋಡ್‌ಗಳನ್ನು ಬಳಸಿಕೊಂಡು, 3 ಟ್ಯಾಪ್‌ಗಳಲ್ಲಿ ರೀಚಾರ್ಜ್ ಮಾಡಿ.
  • ಎಡಿಐ ಚಾಟ್‌ಬಾಟ್: ಸಾಮಾನ್ಯ ತೊಂದರೆಗಳಾದ ರೀಚಾರ್ಜ್ ನಂತರ ಟಿವಿ ನೋಡಲು ಆಗದಿರುವುದು, ಸಬ್‌ಸ್ಕ್ರೈಬ್ ಮಾಡಿದ ಚಾನಲನ್ನು ನೋಡಲು ಆಗದಿರುವುದು ಮುಂತಾದ ತೊಂದರೆಗಳನ್ನು ಎಡಿಐ ಚಾಟ್‌ಬಾಟ್ ಮೂಲಕ ಬಗೆಹರಿಸಿ. ನಿಮ್ಮ ಡಿಶ್‌ಟಿವಿ ಸಂಬಂಧಿಸಿದ ತೊಂದರೆಗಳನ್ನು ಎಡಿಐಗೆ ಹೇಳಿ ಮತ್ತು ತ್ವರಿತ ಪರಿಹಾರ ಪಡೆಯಿರಿ.
  • ಇನ್ಫ್ರಾರೆಡ್ ರಿಮೋಟ್:ನಿಮ್ಮ My DishTV ಆ್ಯಪ್‌ ಮೂಲಕ, ಇನ್ಫ್ರಾರೆಡ್ ರಿಮೋಟ್ ಬಳಸಿ ನಿಮ್ಮ ಡಿಶ್‌ಟಿವಿ ಸೆಟ್-ಟಾಪ್-ಬಾಕ್ಸ್ ಅನ್ನು ನಿಯಂತ್ರಿಸಿ. ಐಆರ್ ರಿಮೋಟ್ ಕೇವಲ ಆಂಡ್ರಾಯ್ಡ್ ಮೊಬೈಲ್ ಡಿವೈಸ್‌ಗಳಿಗೆ ಇನ್ಫ್ರಾರೆಡ್ ಟ್ರಾನ್ಸ್‌ಮಿಟರ್/ಬ್ಲಾಸ್ಟರ್ ಜತೆಗೆ ಲಭ್ಯವಿದೆ.
  • ನಿಮ್ಮ ಪ್ಯಾಕನ್ನು ಮಾರ್ಪಾಟು ಮಾಡಿಕೊಳ್ಳಿ: ಬ್ಯಾಲೆನ್ಸ್, ಸಬ್‌ಸ್ಕ್ರೈಬ್ ಮಾಡಿದ ಪ್ಯಾಕ್ ಮತ್ತು ಸ್ವಿಚ್-ಆಫ್ ದಿನಾಂಕಗಳಂಹ ವಿವರವಾದ ಅಕೌಂಟ್ ಮಾಹಿತಿಯನ್ನು ನೋಡಿ. ಕೆಲವೇ ಟ್ಯಾಪ್‌ಗಳಲ್ಲಿ ನಿಮ್ಮ ಪ್ಯಾಕನ್ನು ಅಪ್ಗ್ರೇಡ್ ಮಾಡಿಕೊಳ್ಳಿ, ಹೆಚ್ಚು ಚಾನಲ್‌ಗಳನ್ನು ಅಥವಾ ಸಕ್ರಿಯ ಸೇವೆಗಳನ್ನು ಸೇರಿಸಿಕೊಳ್ಳಿ. ಪ್ಯಾಕ್ ಆಯ್ಕೆಯ/ಮಾರ್ಪಾಟಿನ ಪ್ರಕ್ರಿಯೆಯನ್ನು ನಿಮಗೆ ಸುಲಭವಾಗುವಂತೆ ರೂಪಿಸಲಾಗಿದೆ.
  • ಚಾನಲ್ ನಂಬರ್ ಫೈಂಡರ್: ಚಾನಲ್ ಹೆಸರಿನೊಂದಿಗೆ ಹುಡುಕಿ ಚಾನಲ್ ನಂಬರನ್ನು ಪಡೆಯಿರಿ.
  • ಚಾನಲ್ ಗೈಡ್: ಡಿಶ್‌ಟಿವಿ ವೇದಿಕೆಯಲ್ಲಿರುವ ಎಲ್ಲಾ ಚಾನಲ್‌ಗಳ ಕಾರ್ಯಕ್ರಮಗಳ ವಿವರವಾದ ವೇಳಾಪಟ್ಟಿ. ಕಾರ್ಯಕ್ರಮಗಳ ವೇಳಾಪಟ್ಟಿಯನ್ನು ನೋಡಿ, ಮೆಚ್ಚಿನ ಕಾರ್ಯಕ್ರಮಗಳನ್ನು ಗುರುತು ಮಾಡಿ ಮತ್ತು ಈ ಕಾರ್ಯಕ್ರಮಗಳಿಗೆ ರಿಮೈಂಡರ್ ಸೆಟ್ ಮಾಡಿ. ಅಲ್ಲದೇ ಕಾರ್ಯಕ್ರಮದ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
  • ಕಾರ್ಯಕ್ರಮದ ಶಿಫಾರಸುಗಳು: ಈಗ My DishTV ಯು ನಿಮ್ಮ ಟಿವಿಯಲ್ಲಿ ನೋಡಬಹುದಾದ ಬಹಳ ಜನಪ್ರಿಯವಾದ ಕಂಟೆಂಟ್ ಅನ್ನು ಶಿಫಾರಸು ಮಾಡಬಲ್ಲದು. ನಿಮ್ಮ ಹೋಮ್ ಪೇಜ್ ಮೇಲೆ ಸದ್ಯದ ಕಾರ್ಯಕ್ರಮಗಳು ಮತ್ತು ಟಾಪ್ ಟಿವಿ ಶೋಗಳು, ಚಲನಚಿತ್ರಗಳು ಮತ್ತು ಕ್ರೀಡೆಗಳ ಬಗ್ಗೆ ಸುಲಭ ಮಾಹಿತಿ.

ಡಿಶ್‌ಟಿವಿ ಆ್ಯಪನ್ನು ಯಾರು ಬಳಸಬಹುದು?

ಆ್ಯಪ್‌ ಡಿಶ್‌ಟಿವಿ ಮತ್ತು ಜಿಂಗ್ ಡಿಜಿಟಲ್ ಸಬ್‌ಸ್ಕ್ರೈಬರ್‌ಗಳಿಗೆ ಮಾತ್ರ ಲಭ್ಯವಿರುತ್ತದೆ.

ಆ್ಯಪ್‌ನಲ್ಲಿ ನಾನು ಹೇಗೆ ನೋಂದಣಿ ಮಾಡುವುದು?

ನೀವು ನಿಮ್ಮ ನೋಂದಾಯಿತ ಮೊಬೈಲ್ ನಂಬರನ್ನು ಆ್ಯಪ್‌ನಲ್ಲಿ ನೋಂದಣಿ ಮಾಡಲು ಬಳಸಬಹುದು. ಲಾಗಿನ್ ಪೇಜಿನಲ್ಲಿ ''ರೆಜಿಸ್ಟರ್''ನ್ನು ಆಯ್ಕೆ ಮಾಡಿ ಮತ್ತು ಮುಂದಿನ ಸ್ಕ್ರೀನ್‌ನಲ್ಲಿ ಆರ್‌ಎಂಎನ್ ನಂಬರನ್ನು ನಮೂದಿಸಿ. ಆರ್‌ಎಂಎನ್ ಅನ್ನು ದೃಢೀಕರಿಸಲು ನಿಮಗೆ ಒಂದು ಒಟಿಪಿ ಬರುತ್ತದೆ. ಒಟಿಪಿ ನಮೂದಿಸಿ ಮತ್ತು ಲಾಗಿನ್ ಮಾಡಲು ನಿಮ್ಮ ಪಾಸ್ವರ್ಡನ್ನು ಆರಿಸಿ.

ನಾನು ಹೇಗೆ ಲಾಗಿನ್ ಆಗುವುದು?

ಆ್ಯಪ್‌ನಲ್ಲಿ 3 ಬೇರೆಬೇರೆ ಮಾದರಿಗಳನ್ನು ಅನುಸರಿಸಿ ನೀವು ಲಾಗಿನ್ ಆಗಬಹುದು:

  • ಆ್ಯಪ್‌ ಕ್ರೆಡೆನ್ಶಿಯಲ್‌ಗಳನ್ನು ಬಳಸುವ ಮೂಲಕ: ನಿಮ್ಮ ಆರ್‌ಎಂಎನ್ ನಂಬರ್/ವಿಸಿ ನಂಬರ್ ಮತ್ತು ಆ್ಯಪ್‌ನಲ್ಲಿ ನೀವು ನೋಂದಣಿ ಸಮಯದಲ್ಲಿ ಆರಿಸಿದ ಪಾಸ್ವರ್ಡ್ ಬಳಸಿ ಮಾಡಬಹುದು. ಆ್ಯಪ್‌ನಲ್ಲಿ ಲಾಗಿನ್ ಆಗಲು www.dishtv.in ಅಕೌಂಟಿನ ಕ್ರೆಡೆನ್ಶಿಯಲ್‌ಗಳನ್ನು ಬಳಸಿಕೊಳ್ಳಬಹುದು.
  • ಒಟಿಪಿ(ಒಂದು ಬಾರಿಯ ಪಾಸ್ಕೋಡ್) ಬಳಸುವ ಮೂಲಕ : ಲಾಗಿನ್ ಪೇಜಿನಲ್ಲಿ ''ರಿಕ್ವೆಸ್ಟ್ ಒಟಿಪಿ'' ಯನ್ನು ಆಯ್ಕೆ ಮಾಡಿ, ಮುಂದಿನ ಪೇಜಿನಲ್ಲಿ ಆರ್‌ಎಂಎನ್ ನಂಬರನ್ನು ನಮೂದಿಸಿ ಮತ್ತು ನಿಮ್ಮ ಆರ್‌ಎಂಎನ್ ನಲ್ಲಿ ನೀವು ಒಂದು ಒಟಿಪಿ ಪಡೆಯುತ್ತೀರಿ. ಒಟಿಪಿಯನ್ನು ಆ್ಯಪ್‌ ಆಟೋರೀಡ್ ಮಾಡುತ್ತದೆ, ನೀವು 'ಸಬ್ಮಿಟ್' ಟ್ಯಾಪ್ ಮಾಡಿ ಮತ್ತು ಲಾಗಿನ್ ಮಾಡಿ.
  • ನಿಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ ಬಳಸುವ ಮೂಲಕ: ನೀವು ನಿಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ (ಜಿಮೇಲ್ ಅಥವಾ ಫೇಸ್‌ಬುಕ್) ಬಳಸಿ, ಒಂದೇ ಟ್ಯಾಪ್ ಮೂಲಕ ಲಾಗಿನ್ ಮಾಡಬಹುದು. ಈ ಮಾದರಿಯನ್ನು ಮೊದಲ ಬಾರಿ ಬಳಸುವಾಗ ಮಾತ್ರ ನಿಮ್ಮ ಸೋಶಿಯಲ್ ಮೀಡಿಯಾ ಅಕೌಂಟಿನ ಕ್ರೆಡೆನ್ಶಿಯಲ್‌ಗಳನ್ನು ಕೊಡಬೇಕು. ನಾವು ನಿಮ್ಮ ಸೋಶಿಯಲ್ ಮೀಡಿಯಾ ಅಕೌಂಟನ್ನು ಡಿಶ್ ಟಿವಿ ಅಕೌಂಟಿಗೆ ಲಿಂಕ್ ಮಾಡುತ್ತೇವೆ ಮತ್ತು ಮುಂದಿನ ಬಾರಿ ಲಾಗಿನ್ ಮಾಡುವಾಗ ನೀವು ನಿಮ್ಮ ಆದ್ಯತೆಯ ಸೋಶಿಯಲ್ ಮೀಡಿಯಾ ಆಯ್ಕೆಯ ಮೇಲೆ ಒಂದೇ ಬಾರಿ ಟ್ಯಾಪ್ ಮಾಡಿ ಲಾಗಿನ್ ಮಾಡಬಹುದು.

ನಾನು ಪಾಸ್ವರ್ಡನ್ನು ನೆನಪಿಟ್ಟುಕೊಳ್ಳದಿದ್ದರೆ ಏನು ಮಾಡಬೇಕು?

ಲಾಗಿನ್ ಪೇಜಿನಲ್ಲಿ ''ಫಾರ್ಗಾಟ್ ಪಾಸ್ವರ್ಡ್''ಅನ್ನು ಟ್ಯಾಪ್ ಮಾಡಿ -> ನಿಮ್ಮ ಆರ್‌ಎಂಎನ್ ನಮೂದಿಸಿ ಮತ್ತು ನಿಮ್ಮ ಆರ್‌ಎಂಎನ್ ಗೆ ಪಾಸ್ವರ್ಡ್ ಇರುವ ಎಸ್ಎಂಎಸ್ ಬರುತ್ತದೆ ಮತ್ತು ನಿಮ್ಮ ನೋಂದಾಯಿತ ಇಮೇಲ್ ಐಡಿಗೆ ಇಮೇಲ್ ಕೂಡ ಬರುತ್ತದೆ.

ಬದಲಾಗಿ, ನೀವು ಒಟಿಪಿ ಮಾದರಿಯನ್ನು ಬಳಸಿಯೂ ಕೂಡ ಈ ಮೇಲೆ ವಿವರಿಸಿದಂತೆ ಲಾಗಿನ್ ಮಾಡಬಹುದು.

ನಾನು ಒಂದೇ ಲಾಗಿನ್ನಿನಿಂದ ನನ್ನ ಎಲ್ಲಾ ಅಕೌಂಟ್‌ಗಳನ್ನು ನಿರ್ವಹಿಸಬಹುದೇ?

ಹೌದು, ಒಂದುವೇಳೆ ನೀವು ಲಾಗಿನ್ ಮಾಡಲು ಆರ್‌ಎಂಎನ್ ನಂಬರ್ ಬಳಸುತ್ತಿದ್ದರೆ, ನೀವು ಲಾಗಿನ್ ಮಾಡುವಾಗ ವಿಸಿ ನಂಬರ್ ಅನ್ನು ಆಯ್ಕೆ ಮಾಡಲು ಕೇಳಲಾಗುವುದು. ಆ ಪ್ರಾಂಪ್ಟ್‌ನಲ್ಲಿ ನೀವು ಬಯಸಿದ ಅಕೌಂಟಿಗೆ ವಿಸಿ ನಂಬರ್ ಅನ್ನು ಆಯ್ಕೆ ಮಾಡಿ.
ಬೇರೊಂದು ವಿಸಿ ನಂಬರ್ (ಅದೇ ಮೊಬೈಲ್ ನಂಬರ್ ಅಡಿಯಲ್ಲಿ ನೋಂದಣಿ ಆದ) ಕುರಿತು ಮಾಹಿತಿಯನ್ನು ನೋಡಲು, ಹೋಮ್ ಪೇಜ್ ಮೇಲೆ ಕಾಣುತ್ತಿರುವ ನಿಮ್ಮ ವಿಸಿ ನಂಬರ್ ಮೇಲೆ ಟ್ಯಾಪ್ ಮಾಡಿ ಮತ್ತು ವಿಸಿ ನಂಬರ್‌ಗಳ ಪಟ್ಟಿಯನ್ನು ನೋಡಿ, ಅದರ ಮಾಹಿತಿಯನ್ನು ನೋಡಲು ವಿಸಿ ನಂಬರ್ ಅನ್ನು ಆಯ್ಕೆ ಮಾಡಿ.

ನಾನು ರೀಚಾರ್ಜ್ ಮಾಡಲು ಇರುವ ವಿವಿಧ ಪಾವತಿ ಮೋಡ್‌ಗಳು ಯಾವವು?

ನೀವು ಈ ಕೆಳಗಿನ ಪಾವತಿ ಮೋಡ್‌ಗಳಿಂದ ರೀಚಾರ್ಜ್ ಮಾಡಬಹುದು:

  1. ಡೆಬಿಟ್ ಕಾರ್ಡ್
  2. ಕ್ರೆಡಿಟ್ ಕಾರ್ಡ್
  3. ನೆಟ್‌ಬ್ಯಾಂಕಿಂಗ್
  4. ಯುಪಿಐ
  5. ವಾಲೆಟ್‌ಗಳು
    • ಪೇಟಿಎಂ
    • ಮೊಬಿಕ್ವಿಕ್
    ನಾವು ಇನ್ನಷ್ಟು ವಾಲೆಟ್‌ಗಳನ್ನು ಸೇರಿಸುವ ಹಂತದಲ್ಲಿದ್ದೇವೆ.

ಚಾನಲ್ ಮಾರ್ಗದರ್ಶಿ ಯಾವ ಮಾಹಿತಿಯನ್ನು ಒದಗಿಸುತ್ತದೆ?

ಚಾನೆಲ್ ಗೈಡ್ ಮುಂದಿನ 7 ದಿನಗಳಿಗೆ ಡಿಶ್‌ಟಿವಿ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿರುವ ಎಲ್ಲಾ ಚಾನಲ್‌ಗಳ ಕಾರ್ಯಕ್ರಮ ವೇಳಾಪಟ್ಟಿಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ.. ಬಿಡಿ ಕಾರ್ಯಕ್ರಮಗಳ ಬಗ್ಗೆ ವಿವರವಾದ ಮಾಹಿತಿಯನ್ನೂ ಕೊಡುತ್ತದೆ.
ಅದರ ಜತೆಗೆ, ನೀವು ಚಾನಲ್‌ಗಳನ್ನು ಮೆಚ್ಚಿನವು ಎಂದು ಗುರುತು ಮಾಡಬಹುದು, ನಿಮ್ಮ ಮೆಚ್ಚಿನ ಕಾರ್ಯಕ್ರಮಗಳ ರಿಮೈಂಡರ್ ಸೆಟ್ ಮಾಬಹುದು ಮತ್ತು ನಿಮ್ಮ ಸ್ನೇಹಿತರೊಂದಿಗೆ ಕಾರ್ಯಕ್ರಮಗಳ ಮಾಹಿತಿಯನ್ನು ಹಂಚಿಕೊಳ್ಳಬಹುದು.

ಕಾರ್ಯಕ್ರಮಕ್ಕೆ ರಿಮೈಂಡರ್ ಸೆಟ್ ಮಾಡುವುದು ಹೇಗೆ?

ಚಾನಲ್ ಮಾರ್ಗದರ್ಶಿಗೆ ಹೋಗಿ -> ನಿಮಗೆ ಬೇಕಾದ ಕಾರ್ಯಕ್ರಮವನ್ನು ನ್ಯಾವಿಗೇಟ್ ಮಾಡಿ ಪಡೆಯಿರಿ (ನೀವು ಕಾರ್ಯಕ್ರಮಗಳನ್ನು ಹುಡುಕಲೂಬಹುದು) -> ನೀವು ಬಯಸಿದ ಕಾರ್ಯಕ್ರಮದ ಮೇಲೆ ಟ್ಯಾಪ್ ಮಾಡಿ, ಅದು ವಿವರವುಳ್ಳ ಪಾಪ್-ಅಪ್ ತೆರೆಯುತ್ತದೆ. ಆ ಪಾಪ್-ಅಪ್ ಕೆಳಗಡೆ ರಿಮೈಂಡರ್ ಗುರುತು ಇರುತ್ತದೆ. ಅದನ್ನು ಟ್ಯಾಪ್ ಮಾಡುವ ಮೂಲಕ ಕಾರ್ಯಕ್ರಮದ ರಿಮೈಂಡರನ್ನು ನಿಮ್ಮ ಕ್ಯಾಲೆಂಡರಿಗೆ ಸೇರಿಸಿ.

ನನ್ನ ಮೆಚ್ಚಿನ ಚಾನಲ್‌ಗಳನ್ನು ಪಡೆಯಲು, ಚಾನಲ್‌ಗಳನ್ನು ಮೆಚ್ಚಿನವು ಎಂದು ಹೇಗೆ ಮಾರ್ಕ್ ಮಾಡುವುದು?

ಚಾನಲ್ ಮಾರ್ಗದರ್ಶಿಯಲ್ಲಿ ಯಾವುದೇ ಒಂದು ಚಾನಲ್ ಅನ್ನು ಮೆಚ್ಚಿನದು ಎಂದು ಮಾರ್ಕ್/ಅನ್‌ಮಾರ್ಕ್ ಮಾಡಲು ಚಾನಲ್ ಐಕಾನ್ ಮೇಲೆ ಟ್ಯಾಪ್ ಮಾಡಿ. ನೀವು ಮೆಚ್ಚಿನವು ಎಂದು ಮಾರ್ಕ್ ಮಾಡಿದ ಚಾನಲ್‌ಗಳ ಪಟ್ಟಿ ಪಡೆಯಲು, ಫಿಲ್ಟರ್‌ಗೆ ಹೋಗಿ ಮೆಚ್ಚಿನವು ಅನ್ನು ಆಯ್ಕೆ ಮಾಡಿ (ಫಿಲ್ಟರ್ ಲಿಸ್ಟ್‌ನಲ್ಲಿ ಮೊದಲನೆಯ ಐಟಮ್) -> ಅಪ್ಲೈ ಮಾಡಿ.

ಯಾವ ಆಪರೇಟಿಂಗ್ ಸಿಸ್ಟಮ್‌ಗಳಲ್ಲಿ ಆ್ಯಪ್‌ ಲಭ್ಯವಿದೆ?

ಆಂಡ್ರಾಯ್ಡ್ ಒಎಸ್ 4.0 ಮತ್ತು ಅದಕ್ಕೂ ಹೆಚ್ಚಿನ ವರ್ಶನ್‌ಗೆ ಈ ಆ್ಯಪ್‌ ಲಭ್ಯವಿದೆ.

ನಾನು ಆ್ಯಪ್‌ನಲ್ಲಿ ಟಿವಿ ಕಂಟೆಂಟನ್ನು ನೋಡಬಹುದೇ?

ಸದ್ಯಕ್ಕೆ My DishTV ಆ್ಯಪ್‌ನಲ್ಲಿ ಸ್ಟ್ರೀಮಿಂಗ್ ಫೀಚರ್ ಇರುವುದಿಲ್ಲ. ಡಿಶ್‌ಟಿವಿಯು ಹೋಮ್ ಪೇಜಿನಲ್ಲಿ ಸದ್ಯಕ್ಕೆ ನಡೆಯುತ್ತಿರುವ ಮತ್ತು ಮುಂಬರುವ ಟಿವಿ ಶೋಗಳು, ಚಲನಚಿತ್ರಗಳು, ಕ್ರೀಡೆಗಳ ಬಗ್ಗೆ ಶಿಫಾರಸುಗಳನ್ನು ಕೊಡುತ್ತದೆ.

ಎಡಿಐ ಚಾಟ್‌ಬಾಟ್ ಅನ್ನು ಆ್ಯಪ್‌ನಲ್ಲಿ ಬಳಸುವುದು ಹೇಗೆ?

ಎಡಿಐ ಚಾಟ್‌ಬಾಟ್ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಬಲ್ಲದು ಮತ್ತು ಡಿಶ್ ಟಿವಿ ಸಂಬಂಧಪಟ್ಟ ತೊಂದರೆಗಳನ್ನು ತ್ವರಿತವಾಗಿ ಪರಿಹರಿಸಬಲ್ಲದು. ಹೋಮ್ ಪೇಜಿನ ಬಲಗಡೆ ಕೆಳಗೆ ಇರುವ ಎಡಿಐ ಐಕಾನ್ ಅನ್ನು ಟ್ಯಾಪ್ ಮಾಡಿ ಮತ್ತು ನಿಮ್ಮ ಸಾಮಾನ್ಯ ತೊಂದರೆಗಳನ್ನು ಚಾಟ್ ರೂಪದಲ್ಲಿ ಬರೆಯಿರಿ. ನಿಮಗೆ ಎಡಿಐ ಒದಗಿಸುವ ಪ್ರಾಂಪ್ಟ್‌ಗಳಿಂದ ಬೇಕಾದುದನ್ನು ಆಯ್ಕೆ ಮಾಡಿ ಫ್ಲೋ ಮೂಲಕ ಹೋಗಬಹುದು.

ಇನ್ಫ್ರಾರೆಡ್ ರಿಮೋಟ್ ಅನ್ನು ಬಳಸುವುದು ಹೇಗೆ?

ಇನ್ಫ್ರಾರೆಡ್ ಬ್ಲಾಸ್ಟರ್/ಟ್ರಾನ್ಸ್‌ಮಿಟರ್ ಬಿಲ್ಟ್-ಇನ್ ಇರುವ ಸಾಧನಗಳಲ್ಲಿ ಮಾತ್ರ ಇನ್ಫ್ರಾರೆಡ್ ರಿಮೋಟ್ ಕೆಲಸ ಮಾಡುತ್ತದೆ. ಅಂತಹ ಉದಾಹರಣೆಗಳೆಂದರೆ ರೆಡ್‌ಮಿ 4/5 ಮತ್ತು ರೆಡ್‌ಮಿ 4/5 ಒಂದುವೇಳೆ ನಿಮ್ಮದು ಅರ್ಹ ಸಾಧನವಾಗಿದ್ದಲ್ಲಿ, ಹೋಮ್ ಪೇಜ್ ಮೇಲೆ ಕೆಳಗಡೆಯ ನ್ಯಾವಿಗೇಶನ್ನಿನ ಮಧ್ಯೆ ಐಆರ್ ರಿಮೋಟ್ ಐಕಾನ್ ಕಂಡುಬರುತ್ತದೆ.
ರಿಮೋಟ್ ಅನ್ನು ಅಕ್ಸೆಸ್ ಮಾಡಲು ಐಆರ್ ರಿಮೋಟ್ ಐಕಾನ್ ಮೇಲೆ ಟ್ಯಾಪ್ ಮಾಡಿ. ಇಂಟರ್‌ಫೇಸ್ ಸ್ವಯಂ-ವಿವರಣಾತ್ಮಕವಾಗಿದೆ ಮತ್ತು ನಿಮ್ಮ ಡಿಶ್‌ಟಿವಿ ರಿಮೋಟ್ ಅನ್ನು ಹೋಲುತ್ತದೆ.
ಮೇಲಕ್ಕೆ ಸ್ಕ್ರೋಲ್ ಮಾಡಿ