ಡಿಶ್ ಟಿವಿ ಆಂಡ್ರಾಯ್ಡ್ ಸೆಟ್ ಟಾಪ್ ಬಾಕ್ಸ್ ಬೆಲೆ, ಎಚ್‌ಡಿಎಂಐ ಮಾನಿಟರ್ ಟು ಟಿವಿ ಕನೆಕ್ಟರ್
Recharge, Manage your Account & Explore Exciting Offers!
close
DTH India, Digital TV, DTH Services| Dish TV
  • ತ್ವರಿತ ರೀಚಾರ್ಜ್

  • New Connection ಹೊಸ ಕನೆಕ್ಷನ್
  • Need Help ಸಹಾಯ ಪಡೆಯಿರಿ
  • My Account ಲಾಗಿನ್‌
    My Account ನನ್ನ ಅಕೌಂಟ್
    Manage Your Packs ನಿಮ್ಮ ಪ್ಯಾಕ್‌ಗಳನ್ನು ನಿರ್ವಹಿಸಿ
    Self Help ಸ್ವಸಹಾಯ
    Complaint Tracking ದೂರು ಟ್ರ್ಯಾಕಿಂಗ್
Atminirbhar

ಅಧಿಕವಾದುದನ್ನು ಪಡೆಯಿರಿ DishSMRT hub ಜತೆಗೆ ಟಿವಿ ನೋಡಿ @ 1694#

ಈಗಲೇ ಪಡೆಯಿರಿ

dishSmartHub
#ಅಸ್ತಿತ್ವದಲ್ಲಿರುವ ಡಿಶ್ ಟಿವಿ ಸಬ್‌ಸ್ಕ್ರೈಬರ್‌ಗಳಿಗೆ + ಪ್ಯಾಕ್ ಬೆಲೆ
 
hub
hub
hub
hub
hub
hub
  • ನಿಮ್ಮ ಮನರಂಜನೆಯ ಕೇಂದ್ರ ಮತ್ತು ಇನ್ನೂ ಹೆಚ್ಚಿನದು

  • ಸಾಮಾನ್ಯ ಚಾನಲ್‌‌ಗಳು + ವೆಬ್‌‌ನಿಂದ ಸ್ಟ್ರೀಮ್ ಕಂಟೆಂಟ್

  • google playstore ನಿಂದ ಆ್ಯಪ್‌ಗಳು ಮತ್ತು ಗೇಮ್‌‌ಗಳನ್ನು ಡೌನ್ಲೋಡ್ ಮಾಡಿ

  • google assistant ಜೊತೆಗೆ ವಾಯ್ಸ್ ಸರ್ಚ್

  • ಕಸ್ಟಮೈಜ್ ಮಾಡಬಲ್ಲ ಹೋಮ್ ಸ್ಕ್ರೀನ್

  • ಸ್ಮಾರ್ಟ್ ಹೋಮ್ ಡಿವೈಸ್‌ಗಳನ್ನು ನಿಯಂತ್ರಿಸಿ

ಹಲವು ಬಳಕೆದಾರರ ಪ್ರೊಫೈಲ್‌ಗಳನ್ನು ರಚಿಸಿ

ಹೆಚ್ಚು ಓದಿ

ರಿಮೋಟ್ ಆ್ಯಪ್ ಮೂಲಕ ಇದನ್ನು ನಿಮ್ಮ ಫೋನಿನಿಂದ ನಿಯಂತ್ರಿಸಿ

ಹೆಚ್ಚು ಓದಿ

ಕ್ರೋಮ್‌ಕಾಸ್ಟ್

ಹೆಚ್ಚು ಓದಿ

ಮಿರಾಕಾಸ್ಟ್

ಹೆಚ್ಚು ಓದಿ

ಆಗಾಗ್ಗೆ ಕೇಳುವ ಪ್ರಶ್ನೆಗಳು

DishSMRT hub ಎಂದರೇನು? ಈ ಬಾಕ್ಸಿನಲ್ಲಿ ಯಾವ ಫೀಚರ್‌ಗಳು ಲಭ್ಯವಿವೆ?
DishSMRT hub ಒಂದು ಆಂಡ್ರಾಯ್ಡ್ ಟಿವಿ ಆಧಾರಿತ ಇಂಟರ್ನೆಟ್ ಕನೆಕ್ಟ್ ಆದ ಸೆಟ್-ಟಾಪ್ ಬಾಕ್ಸ್ ಆಗಿದ್ದು, ಇದು ನಿಯಮಿತ ಟಿವಿ ಚಾನೆಲ್‌ಗಳ ಜೊತೆಗೆ ವಿವಿಧ ಆ್ಯಪ್‌ಗಳು ಮತ್ತು ಗೇಮ್‌ಗಳಿಗೆ ಅಕ್ಸೆಸ್ ಅನ್ನು ನೀಡುತ್ತದೆ. ಇದು google assistant, ಬಿಲ್ಟ್-ಇನ್ ಕ್ರೋಮ್‌ಕಾಸ್ಟ್, ವೈ-ಫೈ ಮತ್ತು ಬ್ಲೂಟೂತ್ ಸಪೋರ್ಟ್ ಮತ್ತು ವಾಯ್ಸ್ ರಿಮೋಟ್ ಜತೆಗೆ ಬರುತ್ತದೆ.
  • ಎ) ನೀವು ಈಗ ಗೂಗಲ್ ಪ್ಲೇಸ್ಟೋರ್‌ನಿಂದ ಅಮೆಜಾನ್ ಪ್ರೈಮ್, ಝೀ5, ವೂಟ್, ಸೋನಿಲಿವ್, ಆಲ್ಟ್ ಬಾಲಾಜಿ, ಹಾಟ್‌ಸ್ಟಾರ್ ಮತ್ತು ಯೂಟ್ಯೂಬಿನಂತಹ ಅನೇಕ ಆ್ಯಪ್‌ಗಳಿಗೆ ಅಕ್ಸೆಸ್ ಪಡೆಯಬಹುದು.
  • b) ಇನ್‌ಬಿಲ್ಟ್ ಕ್ರೋಮ್‌ಕಾಸ್ಟ್‌ನೊಂದಿಗೆ, ನಿಮ್ಮ ಟಿವಿಗೆ ನೇರವಾಗಿ ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಅಥವಾ ಮೊಬೈಲ್ ಫೋನಿನಿಂದ ನೀವು ಯಾವುದೇ ಶೋ, ಚಲನಚಿತ್ರಗಳು, ಸಂಗೀತ, ಗೇಮ್‌ಗಳು, ಕ್ರೀಡೆಗಳು, ಫೋಟೋಗಳು, ವೀಡಿಯೋಗಳು ಮತ್ತು ಮುಂತಾದವುಗಳ ಬಿತ್ತರವನ್ನು ಪಡೆಯಬಹುದು.
  • ಸಿ) google assistant ವಾಯ್ಸ್ ಸರ್ಚ್‌ನಿಂದ ಕಂಟೆಂಟ್ ಡಿಸ್ಕವರಿ ಸುಲಭ
  • ಡಿ) ನೀವು ನಿಮ್ಮ ನೆಚ್ಚಿನ ಟಿವಿ ಚಾನೆಲ್‌ಗಳನ್ನು ವೀಕ್ಷಿಸಬಹುದು ಮತ್ತು ಅನುಕೂಲಕ್ಕೆ ತಕ್ಕಂತೆ ನೆಚ್ಚಿನ, ರಿಮೈಂಡರ್‌ಗಳು ಮತ್ತು ರೆಕಾರ್ಡ್ ಕಾರ್ಯಕ್ರಮಗಳನ್ನು ಹೊಂದಿಸಬಹುದು
  • ಇ) ನೀವು ಆಯ್ಕೆಮಾಡಿದ ಪ್ರೊಫೈಲ್ ಪ್ರಕಾರ ವೈಯಕ್ತಿಕಗೊಳಿಸಿದ ಕಂಟೆಂಟ್ ಶಿಫಾರಸುಗಳನ್ನು ನೋಡಬಹುದು.
ಅಕ್ಸೆಸ್ ಮಾಡಲು ಯಾವೆಲ್ಲಾ ಆ್ಯಪ್‌ಗಳು ಲಭ್ಯವಿವೆ?
ಆ್ಯಪ್‌ ವಿಭಾಗದಿಂದ, ನಿಮ್ಮ ಸೆಟ್-ಟಾಪ್-ಬಾಕ್ಸಿನಲ್ಲಿ ಆ್ಯಪ್‌ಗಳಾದ ಪ್ರೈಮ್ ವಿಡಿಯೋ, ಜೀ 5, ವೂಟ್, ಸೋನಿಲಿವ್, ಆಲ್ಟ್ ಬಾಲಾಜಿ, ಹಂಗಾಮಾ ಮತ್ತು ವಾಚೋಗಳಂತಹ ಫೀಚರ್ ಆದ ಮತ್ತು ಮುಂಚೆಯೇ ಲೋಡ್ ಆದ ಆ್ಯಪ್‌ಗಳನ್ನು ಅಕ್ಸೆಸ್ ಮಾಡಬಹುದು. ನೀವು ಒಟಿಟಿ (ಯುಟ್ಯೂಬ್, ಹಾಟ್‌ಸ್ಟಾರ್), ಸ್ಪೋರ್ಟ್ಸ್ (ಇಎಸ್‌ಪಿಎನ್, ಸಿಎನ್‌ಬಿಸಿ, ಎನ್‌ಬಿಸಿ, ಫಾಕ್ಸ್ ಸ್ಪೋರ್ಟ್ಸ್), ನ್ಯೂಸ್ (ಎನ್‌ಡಿಟಿವಿ, ಆಜ್ ತಕ್, ಇಂಡಿಯಾ ಟುಡೇ), ಸೋಶಿಯಲ್ ಮೀಡಿಯಾ (ಫೇಸ್ಬುಕ್ ವಾಚ್), ಪ್ರೇರಣಾತ್ಮಕ (ಟೆಡ್ ಟಾಕ್ಸ್), ಕುಕಿಂಗ್ (ಫುಡ್ ನೆಟ್ವರ್ಕ್, ಕಿಚನ್ ಸ್ಟೋರಿಗಳು), ಭಕ್ತಿ (ಭಕ್ತಿ) ಮುಂತಾದ ಆಂಡ್ರಾಯ್ಡ್ ಟಿವಿ ಪ್ಲೇಸ್ಟೋರಿನಲ್ಲಿ ಹಲವು ಜಾನರ್‌ಗಳಲ್ಲಿ ಲಭ್ಯವಿರುವ ಸಾವಿರಾರು ಆ್ಯಪ್‌ಗಳನ್ನು ಡೌನ್ಲೋಡ್ ಮಾಡಬಹುದು. ಆ್ಯಪ್‌ಗಳು ಅಥವಾ ಗೇಮ್‌ಗಳು (ಆಸ್ಫಾಲ್ಟ್, ಬಾಂಬ್ ಸ್ಕ್ವಾಡ್, ಮಾರ್ಸ್).
ಈ ಸೆಟ್-ಟಾಪ್ ಬಾಕ್ಸಿನಲ್ಲಿ ಲಭ್ಯವಿರುವ ಇತರ ಫೀಚರ್‌ಗಳು ಯಾವುವು?
ಇದು ಆಂಡ್ರಾಯ್ಡ್ ಟಿವಿ ಆಧಾರಿತ ಪ್ಲಾಟ್‌ಫಾರಂ ಆಗಿದ್ದರಿಂದ ಗೂಗಲ್‌ನಿಂದ ಹೆಚ್ಚಿನ ಫೀಚರ್‌ಗಳು ಮತ್ತು ಸಾಮಾನ್ಯ ಅಪ್ಡೇಟ್‌ಗಳು ಇರುತ್ತವೆ. ಶೀಘ್ರದಲ್ಲೇ ಬರುವ ಕೆಲವು ಇತರ ಫೀಚರ್‌ಗಳು ಹೀಗಿವೆ – ಕ್ಲೌಡ್ ಸ್ಟೋರೇಜ್ ಮತ್ತು ರೆಕಾರ್ಡಿಂಗ್ ಇತ್ಯಾದಿ.
ನಿಯಮಿತ ಸೆಟ್-ಟಾಪ್ ಬಾಕ್ಸ್‌ಗಿಂತ DishSMRT hub ಹೇಗೆ ಉತ್ತಮವಾಗಿದೆ?
  • 1)ಇದು 1 ಜಿಬಿ ರ್‍ಯಾಮ್ ಹೊಂದಿರುವ ಆಂಡ್ರಾಯ್ಡ್ ಟಿವಿ ಆಧಾರಿತ ಇಂಟರ್ನೆಟ್ ಸಂಪರ್ಕವಿರುವ ಸೆಟ್-ಟಾಪ್ ಬಾಕ್ಸ್
  • 2) ವಿವಿಧ ಆ್ಯಪ್‌ಗಳು ಮತ್ತು ಆಪರೇಟಿಂಗ್ ಸಿಸ್ಟಮ್ ಅಪ್ಡೇಟ್‌ಗಳನ್ನು ಡೌನ್ಲೋಡ್ ಮಾಡಲು 8GB ಇಂಟರ್ನಲ್ ಮೆಮೊರಿ
  • 3) ಸುಲಭ ಹುಡುಕಾಟಕ್ಕಾಗಿ ವಾಯ್ಸ್ ರಿಮೋಟ್
  • 4) ಪರ್ಸನಲೈಸೇಶನ್‌ಗಾಗಿ ಅನೇಕ ಪ್ರೊಫೈಲ್‌ಗಳು
  • 5) ನಿಮ್ಮ ಇಚ್ಛೆಯ ಪ್ರಕಾರ ಕಂಟೆಂಟ್ ರೆಕಾರ್ಡ್ ಮಾಡಲು ಎರಡು ಯುಎಸ್‌ಬಿ ಪೋರ್ಟ್‌ಗಳು
  • 6) ನೀವು ಈಗ ನಿಮ್ಮ ಮೆಚ್ಚಿನ ಟಿವಿ ಚಾನೆಲ್‌ಗಳನ್ನು ನೋಡುವುದರ ಜೊತೆಗೆ ವಿವಿಧ ಆ್ಯಪ್‌ಗಳು ಮತ್ತು ಗೇಮ್‌ಗಳನ್ನು ಅಕ್ಸೆಸ್ ಮಾಡಬಹುದು
YouTube/Prime/ZEE5 ಇತ್ಯಾದಿಗಳಂತಹ ಆ್ಯಪ್‌ಗಳನ್ನು ಬಳಸಲು ಪ್ರತ್ಯೇಕ ಶುಲ್ಕಗಳಿವೆಯೇ?
ಗೂಗಲ್‌ನಲ್ಲಿ ಲಭ್ಯವಿರುವ ಯುಟ್ಯೂಬ್, ಗೂಗಲ್ ಪ್ಲೇ ಚಲನಚಿತ್ರಗಳು ಮತ್ತು ಟಿವಿ, ಗೂಗಲ್ ಪ್ಲೇ ಮ್ಯೂಸಿಕ್, ಗೂಗಲ್ ಪ್ಲೇ ಗೇಮ್ಸ್ ಇತ್ಯಾದಿ ಉಚಿತ ಆ್ಯಪ್‌ಗಳು ಅಥವಾ ಪ್ಲೇಸ್ಟೋರ್‌ನಲ್ಲಿ ಲಭ್ಯವಿರುವ ಗೇಮ್‌ಗಳು ಉಚಿತ ಆ್ಯಪ್‌ಗಳನ್ನು ಬಳಸಲು ಯಾವುದೇ ಪ್ರತ್ಯೇಕ ವೆಚ್ಚವಿಲ್ಲ. ಆದಾಗ್ಯೂ, ನೀವು ಪಾವತಿಸಲಾಗುವ ಆ್ಯಪ್‌ಗಳಿಗೆ ಅವರ ಸಬ್‌ಸ್ಕ್ರಿಪ್ಶನ್ ಯೋಜನೆಯ ಪ್ರಕಾರ ಆ್ಯಪ್‌ಗಳಿಗೆ ಹೆಚ್ಚುವರಿಯಾಗಿ ಸಬ್‌ಸ್ಕ್ರೈಬ್ ಮಾಡಬೇಕಾಗಬಹುದು.
ರಿಮೋಟ್ ಕಂಟ್ರೋಲ್‌ನಲ್ಲಿ ಈ ಕೆಳಗಿನ ಕೀಗಳ ಬಳಕೆ ಏನು?
  • ಹೋಮ್: ನೀವು ನೇರವಾಗಿ ಹೋಮ್ ಸ್ಕ್ರೀನನ್ನು ಅಕ್ಸೆಸ್ ಮಾಡಬಹುದು
  • ಆಯ್ಕೆ: ಯಾವುದೇ ಕಾರ್ಯಕ್ರಮಕ್ಕಾಗಿ ವಿವರವಾದ ಡಿಸ್ಕ್ರಿಪ್ಶನ್ ಸ್ಕ್ರೀನನ್ನು ನೀವು ಅಕ್ಸೆಸ್ ಮಾಡಬಹುದು.
  • google assistant: ವಾಯ್ಸ್ ಸರ್ಚ್‌ಗಾಗಿ ನೀವು ಬಳಸಬಹುದು
  • ಹಿಂದೆ: ನೀವು ಹಿಂದಿನ ಭೇಟಿ ಮಾಡಿದ ವಿಭಾಗಕ್ಕೆ ಹಿಂತಿರುಗಿ ಹೋಗಬಹುದು
  • ಯೂಟ್ಯೂಬ್: ನೀವು ನೇರವಾಗಿ ಯೂಟ್ಯೂಬ್ ಅನ್ನು ಅಕ್ಸೆಸ್ ಮಾಡಬಹುದು
  • watcho: ನೀವು ನೇರವಾಗಿ watcho ಆ್ಯಪ್ ಅನ್ನು ಅಕ್ಸೆಸ್ ಮಾಡಬಹುದು
  • ಸೆಟ್ಟಿಂಗ್‌ಗಳು: ನೀವು ನೇರವಾಗಿ ಸೆಟ್ಟಿಂಗ್‌ಗಳ ವಿಭಾಗವನ್ನು ಅಕ್ಸೆಸ್ ಮಾಡಬಹುದು
  • ಗೈಡ್: ನೀವು ನೇರವಾಗಿ ಚಾನೆಲ್ ಮಾರ್ಗದರ್ಶಿಯನ್ನು ಅಕ್ಸೆಸ್ ಮಾಡಬಹುದು
  • ರೆಕಾರ್ಡಿಂಗ್: ನೀವು ನೇರವಾಗಿ ನಿಮ್ಮ ಆಯ್ಕೆಯ ಕಾರ್ಯಕ್ರಮವನ್ನು ರೆಕಾರ್ಡ್ ಮಾಡಬಹುದು.
ನಾನು ಹಲವಾರು ಬಳಕೆದಾರರ ಪ್ರೊಫೈಲ್‌ಗಳನ್ನು ನಾನು ಹೇಗೆ ರಚಿಸಬಹುದು? ನಾನು ಈಗಾಗಲೇ ರಚಿಸಿದ ಪ್ರೊಫೈಲನ್ನು ಹೇಗೆ ಎಡಿಟ್ ಮಾಡಬಹುದು?
ನಿಮ್ಮ ಸ್ಕ್ರೀನಿನ ಮೇಲ್ಭಾಗದಲ್ಲಿ ಎಡಗಡೆಗೆ ಪ್ರೊಫೈಲ್ ವಿಭಾಗವನ್ನು ನೀವು ಅಕ್ಸೆಸ್ ಮಾಡಬಹುದು ಮತ್ತು ನಿಮ್ಮ ಆಯ್ಕೆಯ ಪ್ರಕಾರ 5 ಬಳಕೆದಾರರ ಪ್ರೊಫೈಲ್‌ಗಳನ್ನು ರಚಿಸಬಹುದು. ರಿಮೋಟ್‌ನ ಆಪ್ಶನ್ ಕೀಗಳನ್ನು ಬಳಸಿ ಆ ಪ್ರೊಫೈಲ್‌ಗಳನ್ನು ಎಡಿಟ್ ಮಾಡಬಹುದು.
ಹಲವು ಬಳಕೆದಾರರ ಪ್ರೊಫೈಲ್‌ಗಳನ್ನು ರಚಿಸುವ ಪ್ರಯೋಜನ ಏನು?
ನಿಮ್ಮ ಆಯ್ಕೆಯ ಪ್ರಕಾರ ನೀವು ಸಂಬಂಧಿತ ಕಂಟೆಂಟ್ ಶಿಫಾರಸು ಪಡೆಯುತ್ತೀರಿ. ಸ್ಕ್ರೀನಿನ ಕೆಳಭಾಗದಲ್ಲಿ ಲಭ್ಯವಿರುವ “ನಿಮ್ಮ ಟೈಲ್‌‌ಗಳನ್ನು ಕಸ್ಟಮೈಸ್ ಮಾಡಿ” ಆಯ್ಕೆಗಳಿಂದ ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ನಿಮ್ಮ ಹೋಮ್ ಸ್ಕ್ರೀನ್ ರೈಲ್‌‌ಗಳನ್ನು ಕಸ್ಟಮೈಸ್ ಮಾಡಲು ನಿಮಗೆ ಸಾಧ್ಯವಾಗುತ್ತದೆ. ಜತೆಗೆ ನಿಮ್ಮ ಪ್ರೊಫೈಲ್ ಅಡಿಯಲ್ಲಿ ಆಯ್ಕೆ ಮಾಡಲಾದ ಭಾಷೆ ಮತ್ತು ಪ್ರಕಾರದ ರೀತಿಯಲ್ಲಿ ನಿಮಗೆ ಶಿಫಾರಸು ಮಾಡಲಾದ ರೈಲ್ ಕಂಟೆಂಟ್ ಅನ್ನು ತೋರಿಸುತ್ತದೆ.
ನಾನು ಚಾನೆಲ್‌‌ಗಳು ಅಥವಾ ಆ್ಯಪ್‌‌ಗಳಿಗೆ ಹೇಗೆ ಅಕ್ಸೆಸ್ ಮಾಡಬಹುದು?
ಸಂಬಂಧಿಸಿದ ಚಾನೆಲ್ ಅನ್ನು ಟ್ಯೂನ್ ಮಾಡಲು ರಿಮೋಟ್‍‍‌‍‌ನಿಂದ ನೀವು ಯಾವುದೇ ಚಾನೆಲ್ ನಂಬರ್ ಅನ್ನು ನಮೂದಿಸಬಹುದು ಅಥವಾ ಮಾರ್ಗದರ್ಶಿಯಿಂದ ನಿಮ್ಮ ಆಯ್ಕೆಯ ಚಾನೆಲ್‌‌ಗೆ ಕೂಡ ಅಕ್ಸೆಸ್ ಆಗಬಹುದು. ನೀವು ಇತ್ತೀಚಿಗೆ ವೀಕ್ಷಿಸಿದ ಚಾನೆಲ್ ಅಥವಾ ಆ್ಯಪ್ ಅನ್ನು ಇತ್ತೀಚಿನ ರೈಲಿನಿಂದ ಬಾಕ್ಸಿನ ಹೋಮ್ ಸ್ಕ್ರೀನಿನಲ್ಲಿ ಕೂಡ ನೇರವಾಗಿ ಪ್ರವೇಶಿಸಬಹುದು.
ಚಾನೆಲ್ ಆಡಿಯೋ ಭಾಷೆಯನ್ನು ನಾನು ಹೇಗೆ ಬದಲಾಯಿಸಬಹುದು?
ನಿಮ್ಮ ರಿಮೋಟಿನ ಗ್ರೀನ್ ಬಟನ್‌‌ನಿಂದ ಚಾನೆಲ್ ಆಡಿಯೋದ ಭಾಷೆಯನ್ನು ಬದಲಾಯಿಸಬಹುದು.
ನಾನು ಟಿವಿ ಮಾರ್ಗದರ್ಶಿಯನ್ನು ಹೇಗೆ ಅಕ್ಸೆಸ್ ಮಾಡಬಹುದು?
ರಿಮೋಟ್ ಬಟನ್ ಅಥವಾ ಹೋಮ್ ಸ್ಕ್ರೀನಿನಲ್ಲಿನ ಸೈಡ್ ಮೆನು ಬಾರ್‌‌ನಿಂದ ನೇರವಾಗಿ ಮಾರ್ಗದರ್ಶಿಗೆ ಅಕ್ಸೆಸ್ ಮಾಡಬಹುದು.
ಚಾನೆಲ್ ಗೈಡ್‌‌ನಲ್ಲಿ ಪ್ರಕಾರವನ್ನು ನಾನು ಹೇಗೆ ಬದಲಾಯಿಸಬಹುದು ಅಥವಾ ಸ್ಥಿತ್ಯಂತರ ಮಾಡಬಹುದು?
ಪ್ರಕಾರಗಳನ್ನು ಬದಲಾವಣೆ ಮಾಡಲು ಮತ್ತು ಬೇಕಾಗಿರುವುದನ್ನು ಆಯ್ಕೆ ಮಾಡಲು ರಿಮೋಟಿನಲ್ಲಿ ರೆಡ್ ಬಟನ್ ಅನ್ನು ನೀವು ಬಳಸಬಹುದು. ಆಯ್ದ ಪ್ರಕಾರವನ್ನು ನಿಮ್ಮ ಗೈಡ್‌‌ ಸ್ಕ್ರೀನಿನ ಎಡ ಭಾಗದಲ್ಲಿ ಕೆಂಪು ಬಣ್ಣದಲ್ಲಿ ಕೂಡ ಸೂಚಿಸಲಾಗುತ್ತದೆ.
ಫೇವರೀಟ್ ಅಥವಾ ರಿಮೈಂಡರ್‌‌ಗಳನ್ನು ನಾನು ಹೇಗೆ ಸೆಟ್ ಮಾಡಬಹುದು ಅಥವಾ ತೆಗೆದು ಹಾಕಬಹುದು?
ಚಾನೆಲ್ ಇನ್ಫೋಬಾರ್ ಅಥವಾ ಚಾನೆಲ್ ಗೈಡ್‌‌ನಿಂದ ನೇರವಾಗಿ ನೀವು ಸೆಟ್ ಮಾಡಬಹುದು ಅಥವಾ ತೆಗೆದುಹಾಕಬಹುದು. ರಿಮೋಟಿನಲ್ಲಿ ಆಯ್ಕೆ ಕೀಯಿಂದ ಪ್ರವೇಶಿಸಬಹುದಾದ ವಿವರವಾದ ವಿವರಣೆ ಸ್ಕ್ರೀನಿನಿಂದಲೂ ಕೂಡ ಇದನ್ನು ಹೊಂದಿಸಬಹುದು ಅಥವಾ ತೆಗೆದುಹಾಕಬಹುದು.
ನಾನು ನನ್ನ ಮೆಚ್ಚಿನ ಕಾರ್ಯಕ್ರಮಗಳನ್ನು ರೆಕಾರ್ಡ್ ಮಾಡಬಹುದೇ?
ಹೌದು, ಚಾನೆಲ್ ಮಾಹಿತಿ ಬಾರ್ ಅಥವಾ ಮಾರ್ಗದರ್ಶಿಯಿಂದ ನಿಮ್ಮ ನೆಚ್ಚಿನ ಕಾರ್ಯಕ್ರಮಗಳನ್ನು ರೆಕಾರ್ಡ್ ಮಾಡಬಹುದು. ಅಥವಾ ಸರಳವಾಗಿ ನಿಮ್ಮ ರಿಮೋಟಿನಲ್ಲಿ ರೆಕಾರ್ಡ್ ಕೀ ಬಳಸಿ.
ನಾನು ಎಷ್ಟು ರೆಕಾರ್ಡ್ ಮಾಡಬಹುದು? / ಎಷ್ಟು ಸಮಯದವರೆಗೆ ರೆಕಾರ್ಡ್ ಮಾಡಬಹುದು? / ನನಗೆ ಎಷ್ಟು ಸ್ಪೇಸ್ ಇದೆ?
ಯಾವುದೇ ಪೆನ್ ಡ್ರೈವ್ ಅಥವಾ ಹಾರ್ಡ್ ಡ್ರೈವ್ ಕನೆಕ್ಟ್ ಮಾಡಿದ ನಂತರ ನೀವು ಅನಿಯಮಿತ ರೆಕಾರ್ಡಿಂಗ್ ಮಾಡಬಹುದು.
ಸಪೋರ್ಟ್ ಮಾಡಲಾದ ಗರಿಷ್ಠ USB ಸ್ಟೋರೇಜ್ ಎಷ್ಟು? ಸಪೋರ್ಟ್ ಮಾಡಲಾದ ಫಾರ್ಮ್ಯಾಟ್ ಯಾವುದು?
ಎನ್‌ಟಿಎಫ್ಎಸ್ ಅಥವಾ ಫ್ಯಾಟ್ 32 ಫಾರ್ಮ್ಯಾಟ್‌ ಹೊಂದಿರುವ ಬಾಕ್ಸಿನಲ್ಲಿ ಸಪೋರ್ಟ್ ಮಾಡಲಾದ ಗರಿಷ್ಠ 500 ಜಿಬಿ ಸಾಮರ್ಥ್ಯ.
ನಾನು ಭವಿಷ್ಯದ ಕಾರ್ಯಕ್ರಮಗಳನ್ನು ರೆಕಾರ್ಡ್ ಮಾಡಬಹುದೇ? ಹಿಂದಿನ ಕಾರ್ಯಕ್ರಮವನ್ನು ನಾನು ರೆಕಾರ್ಡ್ ಮಾಡಬಹುದೇ?
ನೀವು ಈಗ ನಡೆಯುತ್ತಿರುವ ಅಥವಾ ನಂತರ ನಡೆಯುವ ಯಾವುದೇ ಕಾರ್ಯಕ್ರಮವನ್ನು ರೆಕಾರ್ಡ್ ಮಾಡಬಹುದು. ಆದಾಗ್ಯೂ, ನೀವು ಈಗಾಗಲೇ ಟೆಲಿಕಾಸ್ಟ್ ಮಾಡಲಾದ ಕಾರ್ಯಕ್ರಮವನ್ನು ರೆಕಾರ್ಡ್ ಮಾಡಲು ಸಾಧ್ಯವಿಲ್ಲ.
ಇಂಟರ್ನೆಟ್‌ನಲ್ಲಿ ಅಂದರೆ ಯುಟ್ಯೂಬ್‌ನಲ್ಲಿ ಬರುವ ಕಾರ್ಯಕ್ರಮಗಳನ್ನು ನಾನು ರೆಕಾರ್ಡ್ ಮಾಡಬಹುದೇ?
ಇದು ನೀವು ಬಳಸುತ್ತಿರುವ ಆ್ಯಪ್‌ಗಳ ಮೇಲೆ ಅವಲಂಬಿತವಾಗಿರುತ್ತದೆ. ಉದಾಹರಣೆಗೆ, ಯುಟ್ಯೂಬ್ ಆಫ್ಲೈನ್ ಫೀಚರ್‌ನಲ್ಲಿ ನೀವು ನಿಮ್ಮ ಸೆಟ್-ಟಾಪ್-ಬಾಕ್ಸಿನಲ್ಲಿ ಕಾರ್ಯಕ್ರಮಗಳನ್ನು ಸ್ಟೋರ್ ಮಾಡಬಹುದು ಆದರೆ ಜೀ5, ವೂಟ್ ಇತ್ಯಾದಿಗಳಂತಹ ಇತರ ಆ್ಯಪ್‌ಗಳು ನಿಮಗೆ ಇಂತಹ ಆಯ್ಕೆಯನ್ನು ನೀಡಲಾಗುವುದಿಲ್ಲ.
ರೆಕಾರ್ಡ್ ಮಾಡಲಾದ ಕಂಟೆಂಟನ್ನು ನಾನು ಹೇಗೆ ಅಕ್ಸೆಸ್ ಮಾಡಬಹುದು? ನಾನು ಅದನ್ನು ಹೇಗೆ ಡಿಲೀಟ್ ಮಾಡಬಹುದು?
ರೆಕಾರ್ಡ್ ಮಾಡಲಾದ ಕಂಟೆಂಟನ್ನು ಸೈಡ್ ಮೆನು ಬಾರ್ ಅಡಿಯಲ್ಲಿ ಲಭ್ಯವಿರುವ ನನ್ನ ರೆಕಾರ್ಡಿಂಗ್ ವಿಭಾಗದಿಂದ ಅಕ್ಸೆಸ್ ಮಾಡಬಹುದು. ಇದು ನನ್ನ ರೆಕಾರ್ಡಿಂಗ್‌ಗಳು, ನಿಗದಿ ಮಾಡಲಾದ ರೆಕಾರ್ಡಿಂಗ್ ಮತ್ತು ರಿಮೈಂಡರ್‌ಗಳನ್ನು ಹೊಂದಿರುತ್ತದೆ. ಅವುಗಳನ್ನು ವೀಕ್ಷಿಸಲು ನೀವು ನನ್ನ ರೆಕಾರ್ಡಿಂಗ್‌ಗಳ ಮೇಲೆ ಕ್ಲಿಕ್ ಮಾಡಬಹುದು. ನಿಗದಿ ಮಾಡಲಾದ ರೆಕಾರ್ಡಿಂಗ್‌ಗಳು ಮತ್ತು ರಿಮೈಂಡರ್‌ಗಳನ್ನು ಸಹ ನೋಡಬಹುದು ಮತ್ತು ಡಿಸ್ಕ್ರಿಪ್ಶನ್ ಪುಟದಿಂದ ಅಳಿಸಬಹುದು.
ನನ್ನ ಹಾರ್ಡ್ ಡಿಸ್ಕ್ ಅಥವಾ ಪೆನ್‌ಡ್ರೈವ್ ಅನ್ನು ನಾನು ಹೇಗೆ ಫಾರ್ಮ್ಯಾಟ್ ಮಾಡಬಹುದು?
ನಿಮ್ಮ ಡ್ರೈವ್ ಆಯ್ಕೆ ಮಾಡಲು ನೀವು ಸೆಟ್ಟಿಂಗ್‌ಗಳು>ರೆಕಾರ್ಡರ್> ಹಾರ್ಡ್ ಡಿಸ್ಕ್ ಫಾರ್ಮ್ಯಾಟಿಗೆ ಹೋಗಬಹುದು. ನಂತರ ಆಯ್ಕೆಮಾಡಿದ ಡ್ರೈವ್ ಅನ್ನು ಫಾರ್ಮ್ಯಾಟ್ ಮಾಡಲು ಆಪ್ಶನ್ ಕೀಯ ಮೇಲೆ ಕ್ಲಿಕ್ ಮಾಡಿ.
ಪೇರೆಂಟಲ್ ಕಂಟ್ರೋಲ್ ಅನ್ನು ನಾನು ಹೇಗೆ ಹೊಂದಿಸಬಹುದು?
ನಿಮ್ಮ ಆಯ್ಕೆಯ ಪ್ರಕಾರ ನೀವು ಸೆಟ್ಟಿಂಗ್‌ಗಳು>ಪೇರೆಂಟಲ್ ಲಾಕ್ ಮೂಲಕ ಚಾನೆಲ್‌ಗಳನ್ನು ಲಾಕ್ ಮಾಡಬಹುದು. ವಿಭಾಗವನ್ನು ಅಕ್ಸೆಸ್ ಮಾಡಲು ನೀವು ಪಾಸ್ವರ್ಡನ್ನು ರಚಿಸಬೇಕು ಮತ್ತು ನಮೂದಿಸಬೇಕಾಗುತ್ತದೆ. ಈಗಾಗಲೇ ಲಾಕ್ ಮಾಡಲಾದ ಚಾನೆಲ್‌ಗಳನ್ನು ಇಲ್ಲಿ ಅನ್ಲಾಕ್ ಮಾಡಬಹುದು. ಇಲ್ಲಿ ನೀವು ಶೈಲಿಯ ಪ್ರಕಾರ ಚಾನೆಲ್‌ಗಳನ್ನು ವಿಂಗಡಿಸಲು ಆಯ್ಕೆಯನ್ನು ಸಹ ಪಡೆಯುತ್ತೀರಿ.
DishSMRT hub ನಲ್ಲಿ ಬಳಸಲು ಯಾವ ಬ್ರೌಸರ್‌ಗಳು ಸಪೋರ್ಟ್ ಮಾಡುತ್ತವೆ?
ಪ್ಲಾಟ್‌ಫಾರಂ ನಲ್ಲಿ ಯಾವುದೇ ಇನ್ಬಿಲ್ಟ್ ಬ್ರೌಸರ್‌ಗಳು ಲಭ್ಯವಿಲ್ಲ. ಆದಾಗ್ಯೂ, ನಿಮ್ಮ ಮೂಲಭೂತ ಬ್ರೌಸಿಂಗ್ ಅಗತ್ಯಗಳಿಗಾಗಿ ಬಳಸಬಹುದಾದ ಗೂಗಲ್ ಪ್ಲೇಸ್ಟೋರಿನಿಂದ ನಿಮ್ಮ ಆಯ್ಕೆಯ ಬ್ರೌಸರನ್ನು ನೀವು ಡೌನ್ಲೋಡ್ ಮಾಡಬಹುದು. ಉದಾ. ಪಫಿನ್ ಟಿವಿ ಬ್ರೌಸರ್, ಟಿವಿ ವೆಬ್ ಬ್ರೌಸರ್, ಆಂಡ್ರಾಯ್ಡ್ ಟಿವಿ ವೆಬ್ ಬ್ರೌಸರ್ ಇತ್ಯಾದಿ.
ನಾನು ಆ್ಯಪ್‌‌ಗಳನ್ನು ಹೇಗೆ ಅಕ್ಸೆಸ್ ಮಾಡಬಹುದು ಅಥವಾ ಹೊಸ ಆ್ಯಪ್‌‌ಗಳನ್ನು ಡೌನ್ಲೋಡ್ ಮಾಡುವುದು ಹೇಗೆ?
ನೀವು ಎಲ್ಲಾ ಆ್ಯಪ್‌‌ಗಳಿಂದ ಅಥವಾ ಫೀಚರ್ಡ್ ಆ್ಯಪ್‌‌ಗಳ ರೈಲ್‌‌ನಿಂದ ಅಥವಾ ಹೋಮ್ ಸ್ಕ್ರೀನಿನಲ್ಲಿ ಆ್ಯಪ್‌‌ಗಳನ್ನು ಅಕ್ಸೆಸ್ ಮಾಡಬಹುದು. ಹೋಮ್ ಸ್ಕ್ರೀನಿನಲ್ಲಿ ಲಭ್ಯವಿರುವ ಸೈಡ್ ಮೆನು ಬಾರಿನಿಂದ ನೀವು ಆ್ಯಪ್‌‌ಗಳ ವಿಭಾಗವನ್ನು ಕೂಡ ಅಕ್ಸೆಸ್ ಮಾಡಬಹುದು. ನೀವು ಎಲ್ಲಾ ಆ್ಯಪ್‌‌ಗಳ ವಿಭಾಗದಿಂದ ಫೀಚರ್ಡ್ ಆ್ಯಪ್‌‌ಗಳನ್ನು ಅಥವಾ ನಿಮ್ಮ ಡೌನ್ಲೋಡ್ ಮಾಡಿದ ಆ್ಯಪ್‌‌ಗಳನ್ನು ಅಕ್ಸೆಸ್ ಮಾಡಬಹುದು. ನೀವು ಗೂಗಲ್ ಪ್ಲೇಸ್ಟೋರಿನಿಂದ ಹೊಸ ಆ್ಯಪ್‌‌ಗಳನ್ನು ಅಥವಾ ಗೇಮ್‌‌ಗಳನ್ನು ಕೂಡ ಡೌನ್ಲೋಡ್ ಮಾಡಬಹುದು.
ನನ್ನ ಡಿವೈಸಿನಿಂದ ಆ್ಯಪ್‌‌ಗಳನ್ನು ನಾನು ಹೇಗೆ ಡಿಲೀಟ್ ಮಾಡಬಹುದು?
ನೀವು ಸೆಟ್ಟಿಂಗ್‌‌ಗಳು>ಆಂಡ್ರಾಯ್ಡ್ ಸೆಟ್ಟಿಂಗ್‌‌ಗಳು>ಆ್ಯಪ್‌ಗಳಿಗೆ ಹೋಗಬಹುದು. ನೀವು ಡಿಲೀಟ್ ಮಾಡಲು ಮತ್ತು ಅನ್ಇನ್ಸ್ಟಾಲ್ ಮಾಡಲು ಬಯಸುವ ಆ್ಯಪನ್ನು ಆಯ್ಕೆಮಾಡಿ.
ನನ್ನ ಸೆಟ್-ಟಾಪ್ ಬಾಕ್ಸಿನಲ್ಲಿ ಇನ್ಸ್ಟಾಲ್ ಮಾಡಲಾದ ಆ್ಯಪ್‌‌ಗಳನ್ನು ನಾನು ಹೇಗೆ ಅಪ್ಡೇಟ್ ಮಾಡಬಹುದು?
google playstore ನಲ್ಲಿ ಡೀಫಾಲ್ಟ್ ಸೆಟ್ಟಿಂಗ್‌‌ಗಳು STB ಇಂಟರ್ನೆಟ್‌‌ನೊಂದಿಗೆ ಕನೆಕ್ಟ್ ಆಗಿದ್ದಾಗ ಸ್ವಯಂಚಾಲಿತವಾಗಿ ಆ್ಯಪ್‌‌ಗಳನ್ನು ಅಪ್ಡೇಟ್ ಮಾಡುತ್ತದೆ. ಈ ಅಪ್ಡೇಟ್‌‌ಗಳು ಹಿನ್ನೆಲೆಯಲ್ಲಿ ನಡೆಯುತ್ತಿರುತ್ತದೆ ಮತ್ತು ಅಪ್ಡೇಟ್ ಸಂದರ್ಭದಲ್ಲಿ ಕಾರ್ಯಕ್ಷಮತೆ ನಿಧಾನ ಕೂಡ ಆಗಬಹುದು. ಒಂದು ವೇಳೆ ನೀವು ಅಂತಹ ಸಮಸ್ಯೆಯನ್ನು ಎದುರಿಸಿದರೆ ನೀವು ಆಟೋ ಆ್ಯಪ್ ಅಪ್ಡೇಟ್‌‌ಗಳನ್ನು ನಿಷ್ಕ್ರಿಯಗೊಳಿಸಬಹುದು. ಬೇರೆ ಬೇರೆ ಆ್ಯಪ್‌ಗಳಿಂದ ಇತ್ತೀಚಿನ ಅಪ್ಡೇಟ್‌‌ಗಳನ್ನು ಮತ್ತು ಫಿಕ್ಸ್‌‌ಗಳನ್ನು ನೀವು ತಪ್ಪಿಸಿಕೊಂಡರೆ ಇದು ಯಾವುದೇ ಶಿಫಾರಸು ಮಾಡುವುದಿಲ್ಲ
ಡಿವೈಸಿನಲ್ಲಿ ಡೌನ್ಲೋಡ್ ಮಾಡಲಾದ ಆ್ಯಪ್‌‌ಗಳು ಎಲ್ಲಿ ಸ್ಟೋರ್ ಆಗುತ್ತವೆ?
ಡೌನ್ಲೋಡ್ ಮಾಡಲಾದ ಆ್ಯಪ್‌‌ಗಳನ್ನು ಸೆಟ್-ಟಾಪ್-ಬಾಕ್ಸಿನ ಆಂತರಿಕ ಮೆಮೊರಿಯಲ್ಲಿ ಸಂಗ್ರಹಿಸಲಾಗುತ್ತದೆ. ಆದ್ದರಿಂದ ಒಂದು ಬಾರಿ ನಿಮ್ಮ ಡಿವೈಸ್ ಮೆಮೊರಿ ಭರ್ತಿಯಾದ ನಂತರ ಸ್ಪೇಸ್ ಖಾಲಿ ಮಾಡಲು ನೀವು ಕೆಲವು ಆ್ಯಪ್‌‌ಗಳನ್ನು ಡಿಲೀಟ್ ಮಾಡಬೇಕಾಗುತ್ತದೆ. ಇದನ್ನು ಯಾವುದೇ ಆಂಡ್ರಾಯ್ಡ್ ಮೊಬೈಲ್ ಡಿವೈಸಿಗಾಗಿ ಮಾಡಲಾಗಿದೆಯೇ.
ಬಾಕ್ಸ್ ನಿಷ್ಕ್ರಿಯ ಸ್ಥಿತಿಯಲ್ಲಿದ್ದರೆ ನೀವು ಯಾವುದೇ ಆ್ಯಪ್ ಅಥವಾ ಇಂಟರ್ನೆಟ್ ಸೇವೆಗಳನ್ನು ಬಳಸಬಹುದೇ ಅಥವಾ ಡೌನ್ಲೋಡ್ ಮಾಡಬಹುದೇ?
ಫ್ಲಾಟ್‌‌ಫಾರ್ಮ್‌‌ನಲ್ಲಿ ಲಭ್ಯವಿರುವ ವಿವಿಧ ಆ್ಯಪ್‌‌ಗಳಿಗೆ ಅಥವಾ ಯಾವುದೇ ಇಂಟರ್ನೆಟ್ ಆಧಾರಿತ ಸೇವೆಗಳಾದ ವಾಯ್ಸ್ ಸರ್ಚ್, ಪೋಸ್ಟರ್‌‌ಗಳು ಇತ್ಯಾದಿಗಳಿಗೆ ಅಕ್ಸೆಸ್ ಆಗಲು ನೀವು ಒಂದು ಸಕ್ರಿಯ ಮತ್ತು ಕಾರ್ಯನಿರತ ಡಿಶ್ ಟಿವಿ ಕನೆಕ್ಷನ್ ಹೊಂದಿರಬೇಕು.
ಸರ್ಚ್ ಕ್ರಿಯಾತ್ಮಕತೆಯನ್ನು ನಾನು ಹೇಗೆ ಬಳಸಬಹುದು?
ಹೋಮ್ ಸ್ಕ್ರೀನಿನಲ್ಲಿ ಸೈಡ್ ಮೆನು ಬಾರ್‌‌ನಿಂದ ನೀವು ಸರ್ಚ್‌‌ಗೆ ಅಕ್ಸೆಸ್ ಮಾಡಬಹುದು. ನಿಮ್ಮ ರಿಮೋಟ್ ಬಳಸಿ ಸ್ಕ್ರೀನ್ ಕೀವರ್ಡ್‌‌ನಲ್ಲಿ ನೀವು ಹುಡುಕುತ್ತಿರುವುದನ್ನು ನೇರವಾಗಿ ಟೈಪ್ ಮಾಡಬಹುದು. ಸಂಬಂಧಿತ ಕಂಟೆಂಟನ್ನು ಹುಡುಕಲು ನೀವು ವಾಯ್ಸ್ ಸರ್ಚ್ ಅನ್ನು ಕೂಡ ಬಳಸಬಹುದು. ರಿಮೋಟ್ ಬಟನ್ ಮೂಲಕ ವಾಯ್ಸ್ ಸರ್ಚ್ ಅನ್ನು ನೇರವಾಗಿ ಅಕ್ಸೆಸ್ ಮಾಡಬಹುದು ಅಥವಾ ಕೀಬೋರ್ಡ್ ಸರ್ಚಿಂಗ್ ಸಂದರ್ಭದಲ್ಲಿ ಸರ್ಚ್ ಟ್ಯಾಬ್ ನಂತರದಲ್ಲಿರುವ ಎಲ್ಎಚ್ಎಸ್‌ನಲ್ಲಿ ಕೂಡ ಲಭ್ಯವಿದೆ.
ನಾನು ವಾಯ್ಸ್ ಸರ್ಚ್ ಅನ್ನು ಹೇಗೆ ಬಳಸಬಹುದು?
ನೀವು ನಿಮ್ಮ ರಿಮೋಟಿನಲ್ಲಿ google assistant ಬಟನ್ ಒತ್ತಿ ಮತ್ತು ರಿಮೋಟ್‌ನಲ್ಲಿ ಹುಡುಕಲು ಬಯಸುವ ಕೀವರ್ಡನ್ನು ಹೇಳಿ. google assistant ನಿಮ್ಮ ವಿಚಾರಣೆಗೆ ಉತ್ತರ ನೀಡುತ್ತದೆ ಅಥವಾ ನಿಮಗೆ ಸಹಾಯ ಮಾಡುತ್ತದೆ. ನೀವು ಅಸಿಸ್ಟಂಟ್‌ನಲ್ಲಿ ಹಲವಾರು ಪ್ರಶ್ನೆಗಳನ್ನು ಕೇಳಬಹುದು
  • 1)ಆ್ಯಪ್‌ಗಳಾದ್ಯಂತ ಮೀಡಿಯಾವನ್ನು ಹುಡುಕಿ ಮತ್ತು ಪ್ಲೇ ಮಾಡಿ
  • 2)ಟಿವಿ ನೋಡುವಾಗ ಉತ್ತರಗಳನ್ನು ಪಡೆಯಿರಿ
  • 3)ನಿಮ್ಮ ಸ್ಮಾರ್ಟ್ ಹೋಮ್ ಡಿವೈಸ್‌ಗಳನ್ನು ನಿಯಂತ್ರಿಸಿ
  • 4)ಮ್ಯೂಸಿಕ್, ಹವಾಮಾನದ ಅಪ್ಡೇಟ್‌ಗಳು ಮತ್ತು ಇನ್ನೂ ಹೆಚ್ಚಿನದನ್ನು ನೋಡಿ
ನೀವು ನಿಮ್ಮ ಗೂಗಲ್ ಹೋಮ್ ಆ್ಯಪ್‌ನಲ್ಲಿ ಆಸಕ್ತಿದಾಯಕ ಮಾರ್ಗಗಳನ್ನು ಸಹ ಸೆಟ್ ಮಾಡಬಹುದು. ಇದರ ಬಗ್ಗೆ ಇನ್ನಷ್ಟು ತಿಳಿಯಲು ದಯವಿಟ್ಟು ಭೇಟಿ ನೀಡಿ https://support.google.com/googlenest/answer/7029585?co=GENIE.Platform%3DAndroid&hl=en
ಕೆಲವು ಸಮಯದಲ್ಲಿ ವಾಯ್ಸ್ ಸರ್ಚ್ ಸರಿಯಾದ ಫಲಿತಾಂಶಗಳನ್ನು ಕೊಡುವುದಿಲ್ಲ. ನಾನು ಏನು ಮಾಡಲಿ?
ಉತ್ತಮ ಫಲಿತಾಂಶಗಳಿಗಾಗಿ ನೀವು ಸೆಟ್ಟಿಂಗ್‌ಗಳು > ಆಂಡ್ರಾಯ್ಡ್ ಸೆಟ್ಟಿಂಗ್‌ಗಳು > ಭಾಷೆ ಮೂಲಕ ಭಾಷೆಯನ್ನು ಬದಲಾಯಿಸಬಹುದು. ಇಂಗ್ಲಿಷ್ (in) ಬಳಸಲು ನಾವು ನಿಮಗೆ ಶಿಫಾರಸು ಮಾಡುತ್ತೇವೆ.
ಹುಡುಕಾಟದ ಫಲಿತಾಂಶಗಳಲ್ಲಿ ವಯಸ್ಕರ ವಿಷಯವನ್ನು ಪಟ್ಟಿ ಮಾಡದಿರುವುದನ್ನು ಖಚಿತಪಡಿಸಿಕೊಳ್ಳುವುದು ಹೇಗೆ?
ಸ್ಕ್ರೀನಿನಲ್ಲಿ ಯಾವುದೇ ಅನಗತ್ಯ ಕಂಟೆಂಟನ್ನು ತಪ್ಪಿಸಲು, ದಯವಿಟ್ಟು ಈ ಕೆಳಗೆ ನಮೂದಿಸಿದ ಹಂತಗಳನ್ನು ಅನುಸರಿಸಿ. ಸೆಟ್ಟಿಂಗ್‌ಗಳು -> ಆಂಡ್ರಾಯ್ಡ್ ಸೆಟ್ಟಿಂಗ್‌ಗಳು -> ಹುಡುಕಿ: ಸುರಕ್ಷಿತ ಸರ್ಚ್‌ಫಿಲ್ಟರ್ ಸಕ್ರಿಯಗೊಳಿಸಿ
ಯುಟ್ಯೂಬ್ ಶಿಫಾರಸುಗಳು ನಿಮ್ಮ ನೋಡುವಿಕೆ ಮಾದರಿಯ ಆಧಾರದ ಮೇಲೆ ಕೆಲಸ ಮಾಡುತ್ತವೆ. ಯೂಟ್ಯೂಬ್ ಸೆಟ್ಟಿಂಗ್‌ಗಳಿಂದ ನಿರ್ಬಂಧಿತ ಮೋಡ್ ಅನ್ನು ಸಕ್ರಿಯಗೊಳಿಸುವ ಮೂಲಕ ನೀವು ಇಲ್ಲಿ ಅನಗತ್ಯ ಕಂಟೆಂಟನ್ನು ನಿಷ್ಕ್ರಿಯಗೊಳಿಸಬಹುದು. ಅಲ್ಲದೆ, ನಿಮ್ಮ ಬ್ರೌಸಿಂಗ್ ಇತಿಹಾಸವನ್ನು ಕ್ಲಿಯರ್ ಮಾಡಿ.
ಯುಟ್ಯೂಬ್ -> ಸೆಟ್ಟಿಂಗ್‌ಗಳು : ನಿರ್ಬಂಧಿತ ಮೋಡನ್ನು ಸಕ್ರಿಯಗೊಳಿಸಿ
ಯಾವುದೇ ನಿರ್ದಿಷ್ಟ ಪ್ರಕಾರದ ಟಿವಿಯೊಂದಿಗೆ ಈ ಬಾಕ್ಸ್ ಅನುಕೂಲಕರವಾಗಿದೆಯೇ?
ಎಲ್ಇಡಿ, ಎಲ್‌ಸಿಡಿ ನಲ್ಲಿ 4 ಕೆ, HD ಅಥವಾ ಪ್ಲಾಸ್ಮಾ ತಂತ್ರಜ್ಞಾನ ಸೇರಿದಂತೆ ಎಲ್ಲಾ ರೀತಿಯ ಟಿವಿಗಳೊಂದಿಗೆ DishSMRT hub ಅನುಕೂಲಕರವಾಗಿದೆ. ಈ ಬಾಕ್ಸ್ ಎಚ್‌ಡಿಎಂಐ ಮತ್ತು ಸಿವಿಬಿಎಸ್ ನ ಬೆಂಬಲ ಈ ಬಾಕ್ಸಿಗೆ ಇದೆ. ಆದ್ದರಿಂದ ಎಚ್‌ಡಿಎಂಐ ಮತ್ತು ಸಿವಿಬಿಎಸ್ ಇನ್ಪುಟ್‌ನೊಂದಿಗೆ ಬೆಂಬಲ ಹೊಂದಿರುವ ಎಲ್ಲಾ ರೀತಿಯ ಟಿವಿಗಳಿಗೆ ಅನುಕೂಲಕರವಾಗಿದೆ.
ಈ ಬಾಕ್ಸಿನೊಂದಿಗೆ ತಂತ್ರಜ್ಞಾನದ ಬದಲಾವಣೆ ಏನು?
ಬಾಕ್ಸ್ ಆಂಡ್ರಾಯ್ಡ್ ಟಿವಿ ಆಧಾರಿತ ಇಂಟರ್ನೆಟ್ ಕನೆಕ್ಟ್ ಆದ ಸೆಟ್-ಟಾಪ್-ಬಾಕ್ಸ್ ಆಗಿದೆ. ಮೊದಲು ಬಾಕ್ಸ್‌ಗಳು SD/HD ಆಗಿವೆ ಮತ್ತು ಕೆಲವು ರೆಕಾರ್ಡರ್ ಸೌಲಭ್ಯವನ್ನು ಹೊಂದಿವೆ.
ಆರಂಭಿಕ ಸೆಟಪ್ ನಂತರ ಯಾವುದೇ ಸಮಸ್ಯೆಗಳ ಸಂದರ್ಭದಲ್ಲಿ ನಾನು ನನ್ನ ಬ್ಲೂಟೂತ್ ರಿಮೋಟ್ ಅನ್ನು ಹೇಗೆ ಜತೆಗೂಡಿಸಬಹುದು?
ನಿಮ್ಮ ಬ್ಲೂಟೂತ್ ರಿಮೋಟ್ ಅನ್ನು ಮತ್ತೊಮ್ಮೆ ಜೊತೆ ಮಾಡಲು 'ಓಕೆ' ಕೀಯನ್ನು ಆರ್‌ಸಿಯು ಮೇಲಿನ ಕೆಂಪು ಬೆಳಕು ಬ್ಲಿಂಕ್ ಆಗುವವರೆಗೆ ಒತ್ತಿ ಹಿಡಿಯಿರಿ. ಇದರ ನಂತರ ನಿಮ್ಮ ರಿಮೋಟ್ ಅನ್ನು ಮತ್ತೆ ಜೊತೆ ಮಾಡಲಾಗುತ್ತದೆ. ಇಂತಹ ಸಮಸ್ಯೆ ಕಂಡು ಬಂದಾಗ ಇದೇ ಹಂತಗಳನ್ನು ಅನುಸರಿಸಿ.
ಟಿವಿ ಪವರ್ ಆನ್ ಮಾಡಲು ನಾನು ಲರ್ನಿಂಗ್ ಕೀಗಳನ್ನು ಹೇಗೆ ಬಳಸಬಹುದು ಮತ್ತು ರಿಮೋಟಿನಲ್ಲಿರುವ ಸೋರ್ಸ್‌‌ ಕೀಗಳು ಏನು?
ಬಳಸಲು ಬಳಕೆದಾರರ ಮ್ಯಾನ್ಯುಯಲ್ ಪೇಜ್ ನಂಬರ್ 6 ನಲ್ಲಿರುವ ಸೆಟಪ್ ಅನ್ನು ರೆಫರ್ ಮಾಡಿ. ಆರ್‌‌ಸಿಯುನಲ್ಲಿ ಲಭ್ಯವಿರುವ ಟಿವಿ ಪವರ್ ಮತ್ತು ಸೋರ್ಸ್ ಕೀಯನ್ನು ಟಿವಿಯನ್ನು ಕಂಟ್ರೋಲ್ ಮಾಡಲು ಬಳಸಬಹುದು.
ಈ ಸೆಟ್-ಟಾಪ್ ಬಾಕ್ಸನ್ನು ನಾನು ಇಂಟರ್ನೆಟ್‌‌ಗೆ ಹೇಗೆ ‌ಕನೆಕ್ಟ್ ಮಾಡಬಹುದು?
DishSMRT hub ಇನ್‌‌ಬಿಲ್ಟ್ ವೈ-ಫೈ ರಿಸೀವರ್ ಅನ್ನು ಹೊಂದಿದೆ, ಆದ್ದರಿಂದ ನೀವು ನಿಮ್ಮ ಮನೆಯ ವೈ-ಫೈ ನೆಟ್ವರ್ಕ್ ಅಥವಾ ಮೊಬೈಲ್ ಹಾಟ್‌‌ಸ್ಪಾಟ್ ಅನ್ನು ಸುಲಭವಾಗಿ ಸಂಪರ್ಕಿಸಬಹುದು. ಒಂದು ವೇಳೆ ನೀವು ಯಾವುದೇ ವೈ-ಫೈ ನೆಟ್ವರ್ಕ್ ಹೊಂದಿಲ್ಲವಾದಲ್ಲಿ ನೀವು ಇದರ್ನೆಟ್ ಕೇಬಲ್ ಬಳಸಿಕೊಂಡು ನಿಮ್ಮ ಬಾಕ್ಸನ್ನು ಸಂಪರ್ಕಿಸಬಹುದು.
ಇದಕ್ಕಾಗಿ ಬೇಕಾಗಿರುವ ಕನಿಷ್ಠ ಇಂಟರ್ನೆಟ್ ವೇಗ ಎಷ್ಟು?
ಶಿಫಾರಸು ಮಾಡಲಾದ ಇಂಟರ್ನೆಟ್ ವೇಗವು 4 ಎಂಬಿಪಿಎಸ್ ಮತ್ತು ಅದಕ್ಕಿಂತ ಹೆಚ್ಚು. ದಯವಿಟ್ಟು ಗಮನಿಸಿ 4ಕೆ ಕಂಟೆಂಟ್‌‌ ಅನ್ನು ವೀಕ್ಷಿಸಲು ಅಧಿಕ ಸ್ಪೀಡಿನ ಅಗತ್ಯತೆ ಉಂಟಾಗಬಹುದು.
ನಾನು ಇಂಟರ್ನೆಟ್ ಬಳಸದಿದ್ದರೆ, ಅಗತ್ಯವಿದ್ದರೆ ನಾನು ಇದನ್ನು ಸರಳ STB ಆಗಿ ಬಳಸಬಹುದೇ?
ಹೌದು, ನೀವು ಅದನ್ನು ಸರಳ ಸೆಟ್-ಟಾಪ್ ಬಾಕ್ಸ್ ಆಗಿ ಬಳಸಬಹುದು, ಆದರೆ ಉತ್ತಮ ಅನುಭವಕ್ಕಾಗಿ ಇಂಟರ್ನೆಟ್ ಸಂಪರ್ಕದೊಂದಿಗೆ ಅದನ್ನು ಬಳಸಲು ಶಿಫಾರಸು ಮಾಡಲಾಗಿದೆ.
ಈ ಬಾಕ್ಸ್ ಎಷ್ಟು ಆಂತರಿಕ ಮೆಮೊರಿ ಹೊಂದಿದೆ ಮತ್ತು ನಾನು ಅದನ್ನು ಹೇಗೆ ಬಳಸಬಹುದು?
ಬಾಕ್ಸ್ 8 ಜಿಬಿ ಆಂತರಿಕ ಮೆಮೊರಿಯನ್ನು ಹೊಂದಿದೆ. ಬಳಕೆದಾರರು ಅವರ ಅವಶ್ಯಕತೆಯ ಪ್ರಕಾರ ಗೂಗಲ್ ಪ್ಲೇಸ್ಟೋರಿನಿಂದ ಆ್ಯಪ್‌‌ಗಳನ್ನು ಮತ್ತು ಗೇಮ್‌‌ಗಳನ್ನು ಡೌನ್ಲೋಡ್ ಮಾಡಬಹುದು. ಆ್ಯಪ್‌‌ಗಳನ್ನು ಸೆಟ್ಟಿಂಗ್‌‌ಗಳು>ಆಂಡ್ರಾಯ್ಡ್ ಸೆಟ್ಟಿಂಗ್‌‌ಗಳು>ಆ್ಯಪ್‌‌ಗಳು> ಸಂಬಂಧಿತ ಆ್ಯಪ್‌‌ಗಳನ್ನು ಆಯ್ಕೆ ಮಾಡಿ>ಅನ್ಇನ್ಸ್ಟಾಲ್‌‌ನಿಂದ ಕೂಡ ನಿರ್ವಹಿಸಬಹುದು ಮತ್ತು ಡಿಲೀಟ್ ಮಾಡಬಹುದು.
ನಾನು ಇದಕ್ಕಾಗಿ ನಿಮ್ಮ ಕಡೆಯಿಂದ ರೆಕಾರ್ಡಿಂಗ್ / ಡೌನ್ಲೋಡ್ ಸ್ಪೇಸ್ ಪಡೆಯಬಹುದೇ?
ರೆಕಾರ್ಡಿಂಗ್ ಬಳಕೆದಾರರು ಅವರದೇ ಸ್ವಂತ ಪೆನ್-ಡ್ರೈವ್ ಅಥವಾ ಯುಎಸ್‌‌ಬಿ ಡಿಸ್ಕನ್ನು ಕನೆಕ್ಟ್ ಮಾಡಬೇಕಾಗುತ್ತದೆ.
ಎಲ್ಲಾ ಆಂತರಿಕ ಮೆಮೊರಿ ಬಳಕೆಯಾಗಿದ್ದರೆ ನಾನು ಏನು ಮಾಡಬೇಕು? ನಾನು ಆಂತರಿಕ ಸ್ಟೋರೇಜನ್ನು ವಿಸ್ತರಿಸಬಹುದೇ?
ಆಂತರಿಕ ಸ್ಟೋರೇಜನ್ನು ವಿಸ್ತರಿಸಲಾಗುವುದಿಲ್ಲ. ಬಾಕ್ಸ್ ಮೆಮೊರಿಯನ್ನು ಖಾಲಿ ಮಾಡಲು ನೀವು ಕೆಲವು ಆ್ಯಪ್‌‌ಗಳನ್ನು ಡಿಲೀಟ್ ಮಾಡಬೇಕಾಗುತ್ತದೆ.
ನನ್ನ ವೈಯಕ್ತಿಕ ಯುಎಸ್‌‌ಬಿ ಡ್ರೈವ್‌‌ನಲ್ಲಿರುವ ನನ್ನ ಫೋಟೋ, ಚಲನ ಚಿತ್ರಗಳನ್ನು ವೀಕ್ಷಿಸುವುದು ಹೇಗೆ.
ನೀವು ನಿಮ್ಮ ಪೆನ್-ಡ್ರೈವ್ ಅನ್ನು ಕನೆಕ್ಟ್ ಮಾಡಬೇಕು ಮತ್ತು ಎಕ್ಸ್‌‌ಟರ್ನಲ್ ಸ್ಟೋರೇಜಿನಲ್ಲಿ ಲಭ್ಯವಿರುವ ಡೇಟಾವನ್ನು ನೋಡಲು ಆಲ್ ಆ್ಯಪ್ಸ್ ರೈಲ್‌‌ನಲ್ಲಿ ಡೌನ್ಲೋಡ್ ಆದ ಆ್ಯಪ್ "ಫೈಲ್ ಬ್ರೌಸರ್" ಗೆ ಅಕ್ಸೆಸ್ ಆಗಿ. ನೀವು ಸ್ಥಳೀಯ ಕಂಟೆಂಟ್ ಬ್ರೌಸಿಂಗನ್ನು ಬೆಂಬಲಿಸುವ ಗೂಗಲ್ ಪ್ಲೇಸ್ಟೋರಿನಿಂದ ಯಾವುದೇ ಆ್ಯಪನ್ನು ಡೌನ್ಲೋಡ್ ಮಾಡಬೇಕಾಗುತ್ತದೆ. ಕೆಲವು ಉದಾಹರಣೆಗಳೆಂದರೆ ಎಫ್ಎಕ್ಸ್ ಫೈಲ್ ಎಕ್ಸ್‌‌ಫ್ಲೋರರ್, ವಿಎಲ್‌‌ಸಿ, ಎಕ್ಸ್‌ಪ್ಲೋರ್ ಫೈಲ್ ಮ್ಯಾನೇಜರ್, ಫೈಲ್ ಮ್ಯಾನೇಜರ್ ಪ್ರೊ ಆಂಡ್ರಾಯ್ಡ್ ಟಿವಿ ಇತ್ಯಾದಿ.
ನನ್ನ ಸ್ಮಾರ್ಟ್‌‌ಫೋನ್‌‌ಗಳಲ್ಲಿ ಇರುವ ನನ್ನ ಫೋಟೋಗಳನ್ನು, ಚಲನ ಚಿತ್ರಗಳನ್ನು ನೋಡುವುದು ಹೇಗೆ? ಕಾಸ್ಟ್ ಅನ್ನು ಬಳಸುವುದು ಹೇಗೆ?
ನೀವು ನೇರವಾಗಿ ದೊಡ್ಡ ಪರದೆಯಲ್ಲಿ ಫೋನ್ ಕಾಸ್ಟ್ ಅಥವಾ ಸ್ಕ್ರೀನ್ ಮಿರರ್ ಮಾಡಬಹುದು. ಕಾಸ್ಟಿಂಗ್ ಫೀಚರ್ ಬಳಸಲು, DishSMRT hub ಮತ್ತು ನಿಮ್ಮ ಸ್ಮಾರ್ಟ್‌ಫೋನ್ ಒಂದೇ ವೈ-ಫೈ ನೆಟ್ವರ್ಕ್‌ನಲ್ಲಿ ಇರಬೇಕು. ಮುಂದೆ, ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಯಾವುದೇ ಕಾಸ್ಟ್ ಸಕ್ರಿಯ ಆ್ಯಪ್‌ ತೆರೆಯಿರಿ. ಟಿವಿ ಸ್ಕ್ರೀನಿನಲ್ಲಿ ಕಂಟೆಂಟ್ ನೋಡಲು ಮತ್ತು ನಿಮ್ಮ ಟಿವಿಯಲ್ಲಿ ಅಪ್ಲಿಕೇಶನ್‌ಗಳನ್ನು ಕಾಸ್ಟ್ ಮಾಡಲು ಕಾಸ್ಟ್ ಐಕಾನನ್ನು ಒತ್ತಿ.
ಸ್ಕ್ರೀನನ್ನು ಟಿವಿಯಲ್ಲಿ ಮಿರರ್ ಮಾಡಲು ನೀವು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಹೋಮ್ ಅಪ್ಲಿಕೇಶನ್ ಅನ್ನು ಬಳಸಬಹುದು. ಕಾಸ್ಟಿಂಗ್ ಬಗ್ಗೆ ಇನ್ನಷ್ಟು ತಿಳಿಯಲು ದಯವಿಟ್ಟು https://support.google.com/chromecastbuiltin/answer/6059461?hl=en ಗೆ ಭೇಟಿ ಕೊಡಿ
ಕ್ರೋಮ್‌‌ಕಾಸ್ಟ್‌‌ನಲ್ಲಿ ಯಾವೆಲ್ಲಾ ಅಪ್ಲಿಕೇಶನ್‌‌ಗಳನ್ನು ಬೆಂಬಲಿಸಲಾಗುತ್ತದೆ?
ಕ್ರೋಮ್‌ಕಾಸ್ಟ್ ಸಕ್ರಿಯಗೊಳಿಸಿದ ಆ್ಯಪ್‌ಗಳ ಪಟ್ಟಿಯನ್ನು ಇಲ್ಲಿ ಕಾಣಬಹುದು – https://www.google.com/chromecast/built-in/apps/
ನಾನು ಇಂಟರ್ನೆಟ್ ನೋಡಲು ಸಾಧ್ಯವಾಗುತ್ತಿಲ್ಲ ಆದರೆ ಡಿಟಿಎಚ್ ಕನೆಕ್ಷನ್ ಚೆನ್ನಾಗಿ ಕೆಲಸ ಮಾಡುತ್ತಿದೆ. ಏನು ಮಾಡಬೇಕು?
ನಿಮ್ಮ ಇಂಟರ್ನೆಟ್ ಕನೆಕ್ಷನ್ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ. ಕನಿಷ್ಠ ಅಗತ್ಯವಿರುವ ವೇಗ 4 ಎಂಬಿಪಿಎಸ್. ಒಂದು ವೇಳೆ ನೀವು ವೀಕ್ಷಿಸಲು ಅಥವಾ ನಿಮ್ಮ ಆಂಡ್ರಾಯ್ಡ್ ಬಾಕ್ಸಿನಲ್ಲಿ ಯಾವುದೇ ಆನ್ಲೈನ್ ಕಂಟೆಂಟನ್ನು ಪ್ಲೇ ಮಾಡಲು ಸಾಧ್ಯವಾಗದಿದ್ದಲ್ಲಿ, ದಯವಿಟ್ಟು ಈ ಕೆಳಗಿನವುಗಳನ್ನು ಪರಿಶೀಲಿಸಿ:
  • 1)ಈ ನೆಟ್ವರ್ಕ್‌ನಲ್ಲಿರುವ ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಇಂಟರ್ನೆಟ್ ಅಕ್ಸೆಸ್ ಮಾಡಲು ನಿಮಗೆ ಸಾಧ್ಯವಾಗುತ್ತಿದೆಯೇ ಎಂದು ದಯವಿಟ್ಟು ಪರಿಶೀಲಿಸಿ. ಹೌದಾದರೆ, ನೀವು ನಿಮ್ಮ ಬಾಕ್ಸ್‌ನಲ್ಲಿ ವೈ-ಫೈ ಅಥವಾ ಐಪಿ ಸೆಟ್ಟಿಂಗ್‌ಗಳನ್ನು ಪರಿಶೀಲಿಸಬೇಕಾಗುತ್ತದೆ.
  • 2)ಯಾವುದಾದರೂ ಆ್ಯಪ್‌ ಅಪ್ಡೇಟ್‌ಗಳು ಪ್ರಗತಿಯಲ್ಲಿವೆಯೇ? ಹೌದಾದರೆ, ಅಪ್ಡೇಟ್‌ಗಳು ಮುಗಿದ ನಂತರ ದಯವಿಟ್ಟು ಮರುಪರಿಶೀಲಿಸಿ.
ಟಿವಿಯಲ್ಲಿ ನೆಟ್ವರ್ಕ್ ವೇಗವನ್ನು ಪರಿಶೀಲಿಸಲು ಯಾವುದೇ ಆ್ಯಪ್ ಇದೆಯೇ?
ಎಟಿವಿ ಪ್ಲೇಸ್ಟೋರಿನಲ್ಲಿ ಲಭ್ಯವಿರುವ ಸ್ಪೀಡ್‌ಟೆಸ್ಟ್ ಆ್ಯಪ್ ಅನ್ನು ನೀವು ಬಳಸಬಹುದು.
ನನ್ನ ಟಿವಿ ನೋಡುವ ಅನುಭವದ ಮೇಲೆ ಹವಾಮಾನ ಪರಿಸ್ಥಿತಿಗಳು ಪರಿಣಾಮ ಬೀರುತ್ತವೆಯೇ?
ಹವಾಮಾನ ಸರಿ ಇಲ್ಲದಿರುವಾಗ ನಿರ್ಬಂಧಿತ ಅಥವಾ ಬ್ಲಾಕ್ ಮಾಡಲಾದ ಸಿಗ್ನಲ್‌ಗಳಿಂದ ಡಿಟಿಎಚ್ ಸಿಗ್ನಲ್ ಮೇಲೆ ಪರಿಣಾಮ ಬೀರಬಹುದು. ನಿಮ್ಮ ಸಂಪರ್ಕವು ಸ್ಥಿರವಾಗಿದ್ದರೆ, ನೀವು ಎಡೆಬಿಡದ ಇಂಟರ್ನೆಟ್ ಆಧಾರಿತ ಸೇವೆಗಳನ್ನು ಪಡೆಯಬಹುದು.
ನಾನು ಬಹಳ ಹೊತ್ತು ಟಿವಿಯನ್ನು ನೋಡಿದರೆ ನನ್ನ ಇಂಟರ್ನೆಟ್‌ಗಾಗಿ ನಾನು ಎಷ್ಟು ಹಣವನ್ನು ತೆರಬೇಕಾಗುತ್ತದೆ?
ಯಾವುದೇ ಟಿವಿ ಚಾನೆಲ್ ನೋಡಲು ನೀವು ಯಾವುದೇ ಇಂಟರ್ನೆಟ್ ಶುಲ್ಕಗಳನ್ನು ತೆರಬೇಕಾಗಿಲ್ಲ. ಹೋಮ್ ಸ್ಕ್ರೀನ್ ಮತ್ತು ವಾಯ್ಸ್ ಸರ್ಚ್‌ ಫೀಚರ್‌ನಲ್ಲಿ ಶಿಫಾರಸುಗಳಿಗಾಗಿ ಇಂಟರ್ನೆಟ್ ಅಗತ್ಯವಿರುತ್ತದೆ, ಆದರೆ ಡೇಟಾ ಬಳಕೆ ಕನಿಷ್ಠ ಆಗಿರುತ್ತದೆ. ನೀವು ಯಾವುದೇ ಆನ್ಲೈನ್ ವಿಡಿಯೋ ಅಥವಾ ವಿಷಯವನ್ನು ನೋಡುತ್ತಿದ್ದರೆ, ನೀವು ಡೇಟಾ ಶುಲ್ಕಗಳನ್ನು ತೆರುತ್ತೀರಿ, ಇದು ಆಯ್ದ ವಿಡಿಯೋ ಗುಣಮಟ್ಟದ ಮೇಲೆ ಅವಲಂಬಿತವಾಗಿರುತ್ತದೆ ಮತ್ತು ಆ್ಯಪ್‌ನಿಂದ ಆ್ಯಪ್‌ಗೆ ಬದಲಾಗುತ್ತದೆ.
ಒಂದು ವೇಳೆ ನಾನು ಇಂಟರ್ನೆಟ್ ಕನೆಕ್ಷನ್ ಹೊಂದಿಲ್ಲದಿದ್ದರೆ ಯಾವ ಫೀಚರ್‌‌ಗಳು ಲಭ್ಯವಿರುವುದಿಲ್ಲ?
ವಾಯ್ಸ್/ಟೆಕ್ಸ್ಟ್ ಆಧಾರಿತ ಹುಡುಕಾಟ, ಹೋಮ್ ಪೇಜಿನಲ್ಲಿನ ಶಿಫಾರಸುಗಳು, ಆಂಡ್ರಾಯ್ಡ್ ಟಿವಿ ಸೇವೆಗಳಾದ ಯುಟ್ಯೂಬ್, ಪ್ಲೇಸ್ಟೋರ್, ಇಂಟರ್ನೆಟ್ ಕನೆಕ್ಟಿವಿಟಿ ಅಗತ್ಯವಿರುವ ಫೀಚರ್ಡ್ ಆ್ಯಪ್‌ಗಳು ಇಂಟರ್ನೆಟ್ ಕನೆಕ್ಟಿವಿ ಇಲ್ಲದಿದ್ದಲ್ಲಿ ಲಭ್ಯವಿರುವುದಿಲ್ಲ.
ರೆಕಾರ್ಡಿಂಗ್ ಮಾಡುವಾಗ ವಿವಿಧ ಕಾರ್ಯಕ್ರಮವನ್ನು ನೋಡಲು ಸಾಧ್ಯವಿದೆಯೇ?
ನಿಮ್ಮ DishSMRT hub ಒಂದೇ ಟ್ಯೂನರ್ ಹೊಂದಿದೆ. ಅಂದರೆ, ಯಾವುದೇ ಸಮಯದಲ್ಲಿ ಒಂದು ಡಿಟಿಎಚ್ ಚಾನೆಲ್‌ಗೆ ಮಾತ್ರ ನೀವು ಟ್ಯೂನ್ ಮಾಡಬಹುದು. ನೀವು ಒಂದು ಸಮಯದಲ್ಲಿ ಪಾಯಿಂಟ್ ಮಾಡಬಹುದು
  • 1)ರೆಕಾರ್ಡ್ ಮಾಡಿ ಮತ್ತು ಅದೇ ಚಾನೆಲ್ ನೋಡಿ
  • 2)1 ಚಾನೆಲ್ ರೆಕಾರ್ಡ್ ಮಾಡಿ ಮತ್ತು ಇತರ ಆ್ಯಪ್‌ಗಳಲ್ಲಿ ಏನನ್ನಾದರೂ ನೋಡಿ
  • 3) 1 ಚಾನೆಲ್ ರೆಕಾರ್ಡ್ ಮಾಡಿ ಮತ್ತು ರೆಕಾರ್ಡಿಂಗ್ ನೋಡಿ
  • 4)ಲೈವ್ ಟಿವಿ ಪಾಸ್ ಮಾಡಿ
ನನ್ನ ಅಸ್ತಿತ್ವದಲ್ಲಿರುವ ಟಿವಿ ರಿಮೋಟ್ DishSMRT hub ನೊಂದಿಗೆ ಕೆಲಸ ಮಾಡುತ್ತದೆಯೇ?
ಇಲ್ಲ. DishSMRT hub ಸಂಬಂಧಿತ ವಿಭಾಗಕ್ಕೆ ಅಕ್ಸೆಸ್ ಆಗಲು google assistant, ಹೋಮ್, ಆಯ್ಕೆ, ಯೂಟ್ಯೂಬ್ ಮತ್ತು watcho ನಂತಹ ವಿಶೇಷ ಕೀಗಳನ್ನು ಹೊಂದಿರುವ ಹೊಸ ಬ್ಲೂಟೂತ್ ರಿಮೋಟ್ ಕಂಟ್ರೋಲ್ ಅನ್ನು ಬಳಸುತ್ತದೆ.
ಈ ಬ್ಲೂಟೂತ್ ರಿಮೋಟಿನಲ್ಲಿ ಯಾವುದೇ ಹೊಸ ಫೀಚರ್‌‌ಗಳು ಲಭ್ಯವಿದೆಯೇ?
ಸೆಟ್-ಅಪ್ ಭಾಗವಾಗಿ ಸೆಟ್-ಟಾಪ್ ಬಾಕ್ಸಿನೊಂದಿಗೆ ಜೋಡಣೆ ಅಗತ್ಯವಿದೆ.
  • 1)ವಾಯ್ಸ್ ಸರ್ಚ್
  • 2) ಟಿವಿಯ ಕಡೆಗೆ ತೋರಿಸುವ ಅಗತ್ಯವಿಲ್ಲ
  • 3)ನಿಮ್ಮ ಆಯ್ಕೆಯ ಕಂಟೆಂಟ್ ಟೈಪ್ ಮಾಡಲು ಮತ್ತು ಹುಡುಕಲು ನೀವು ಕೀಬೋರ್ಡ್ ಅಕ್ಸೆಸ್ ಮಾಡಬಹುದು
ನಾನು ನನ್ನ ಬ್ಲೂಟೂತ್ ಸ್ಪೀಕರ್‌‌ಗಳನ್ನು ಕೂಡ ಕನೆಕ್ಟ್ ಮಾಡಬಹುದೇ?
ಹೌದು, ಬ್ಲೂಟೂತ್ ಸ್ಪೀಕರ್‌‌ಗಳನ್ನು ಕನೆಕ್ಟ್ ಮಾಡಬಹುದು.
ಆಂಡ್ರಾಯ್ಡ್ ಬಾಕ್ಸನ್ನು ನಿಯಂತ್ರಿಸಲು ನಾನು ನನ್ನ ಮೊಬೈಲ್ ಬಳಸಬಹುದೇ?
ನೀವು ಪ್ಲೇಸ್ಟೋರ್‌ನಿಂದ ಆಂಡ್ರಾಯ್ಡ್ ಟಿವಿ ರಿಮೋಟ್ ಕಂಟ್ರೋಲ್ ಆ್ಯಪನ್ನು ಡೌನ್ಲೋಡ್ ಮಾಡಬಹುದು ಮತ್ತು ನಿಮ್ಮ ಆಂಡ್ರಾಯ್ಡ್ ಬಾಕ್ಸನ್ನು ನಿಯಂತ್ರಿಸಲು ಅದನ್ನು ಬಳಸಬಹುದು. ಆರಂಭಿಸಲು, ನಿಮ್ಮ ಆಂಡ್ರಾಯ್ಡ್ ಟಿವಿ ಡಿವೈಸ್ ಆಗಿ ನಿಮ್ಮ ಆಂಡ್ರಾಯ್ಡ್ ಫೋನ್ ಅಥವಾ ಟ್ಯಾಬ್ಲೆಟ್ ಅನ್ನು ಅದೇ ನೆಟ್ವರ್ಕ್‌‌ಗೆ ಕನೆಕ್ಟ್ ಮಾಡಿ ಮತ್ತು ನಂತರ ನಿಮ್ಮ ಆಂಡ್ರಾಯ್ಡ್ ಟಿವಿಯನ್ನು ಬ್ಲೂಟೂತ್ ಮೂಲಕ ನೋಡಿ. ನಂತರ ನಿಮ್ಮ ಆಂಡ್ರಾಯ್ಡ್ ಟಿವಿಗೆ ರಿಮೋಟ್ ಆಗಿ ನಿಮ್ಮ ಆಂಡ್ರಾಯ್ಡ್ ಫೋನ್ ಅಥವಾ ಟ್ಯಾಬ್ಲೆಟ್ ಬಳಸಿ. ನಿಮ್ಮ ಆಂಡ್ರಾಯ್ಡ್ ಟಿವಿ ಡಿವೈಸಿನಲ್ಲಿ ಗೇಮ್‌‌ಗಳನ್ನು ನ್ಯಾವಿಗೇಟ್ ಮಾಡಲು ಡಿ-ಪ್ಯಾಡ್ ಮತ್ತು ಟಚ್‌‌ಪ್ಯಾಡ್ ಮೋಡ್‌‌ಗಳ ನಡುವೆ ಸುಲಭವಾಗಿ ಬದಲಾಯಿಸಿ. ವಾಯ್ಸ್ ಸರ್ಚ್ ಆರಂಭಿಸಲು ಮೈಕ್ ಟ್ಯಾಪ್ ಮಾಡಿ, ಅಥವಾ ಆಂಡ್ರಾಯ್ಡ್ ಟಿವಿಯಲ್ಲಿ ಇನ್ಪುಟ್ ಟೆಕ್ಸ್ಟ್‌ಗಾಗಿ ಕೀಬೋರ್ಡನ್ನು ಬಳಸಿ.
ಇತ್ತೀಚಿನ ಆಂಡ್ರಾಯ್ಡ್ ಸಾಫ್ಟ್‌‌ವೇರ್ ಅಪ್ಡೇಟ್‌‌ಗಳನ್ನು ನಾನು ಹೇಗೆ ಪರಿಶೀಲಿಸಬಹುದು?
ನೀವು ಅಂಡ್ರಾಯ್ಡ್ ವಿಭಾಗಕ್ಕೆ ಹೋಗಿ ನಂತರ ಅಬೌಟ್ ವಿಭಾಗಕ್ಕೆ ಹೋಗಿ, ಅಲ್ಲಿ ಯಾವುದೇ ಸಿಸ್ಟಮ್ ಅಥವಾ ರಿಮೋಟ್ ಕಂಟ್ರೋಲ್ ಸಾಫ್ಟ್‌ವೇರ್ ಅಪ್ಡೇಟ್ ಲಭ್ಯ ಇದೆಯೇ ಎಂದು ಪರಿಶೀಲಿಸಿ.
ಸೆಟ್-ಟಾಪ್-ಬಾಕ್ಸ್ ಸಾಫ್ಟ್‌‌ವೇರ್ ಅಪ್ಡೇಟ್‌‌ಗಳನ್ನು ನಾನು ಹೇಗೆ ಪರಿಶೀಲಿಸಬಹುದು?
ಇತ್ತೀಚಿನ ಸಾಫ್ಟ್‌ವೇರ್ ಲಭ್ಯತೆಗಾಗಿ ಪರಿಶೀಲಿಸಲು ನೀವು ಸೆಟ್ಟಿಂಗ್‌ಗಳು > ಟೂಲ್‌ಗಳು > ಸಾಫ್ಟ್‌ವೇರ್ ಅಪ್ಗ್ರೇಡ್ ವಿಭಾಗಕ್ಕೆ ಭೇಟಿ ನೀಡಬಹುದು.
ಕೆಲವೊಮ್ಮೆ ನನ್ನ ಸೆಟ್-ಟಾಪ್ ಬಾಕ್ಸ್ ಬಹಳ ನಿಧಾನವಾಗಿ ಪ್ರತಿಕ್ರಿಯೆ ನೀಡುತ್ತದೆ. ಈ ಸಮಸ್ಯೆಯನ್ನು ಸರಿಪಡಿಸುವುದು ಹೇಗೆ?
ಇಂತಹ ಪರಿಸ್ಥಿತಿಯನ್ನು ಮರುಪಡೆಯಲು ನೀವು ಪವರ್ ರಿಸೈಕಲ್ ಮಾಡಬೇಕಾಗುತ್ತದೆ. ಸಮಸ್ಯೆಯು ಇನ್ನೂ ಮುಂದುವರೆದರೆ ಸೆಟ್ಟಿಂಗ್‌ಗಳು > ಆಂಡ್ರಾಯ್ಡ್ ಸೆಟ್ಟಿಂಗ್‌ಗಳು > ಸ್ಟೋರೇಜ್ ಮತ್ತು ರೀಸೆಟ್ ಮಾಡಿ ಫ್ಯಾಕ್ಟರಿ ಡೇಟಾ ರಿಸೆಟ್ ಮಾಡಿ.
**ಕೂಪನ್‌ದುನಿಯಾ ಆಫರ್‌ಗಾಗಿ - ನಿಯಮ ಮತ್ತು ಷರತ್ತುಗಳು ಇಲ್ಲಿ ಕ್ಲಿಕ್ ಮಾಡಿ | ರಿಡೀಮ್ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
  • ಮಿರಾಕಾಸ್ಟ್
  • dishSMRT HUB ನ ಬೆಂಬಲದ ಮೂಲಕ ನಿಮ್ಮ ಆಂಡ್ರಾಯ್ಡ್ ಡಿವೈಸ್‌ಗಳಿಂದ ಮಿರರ್ ಕಂಟೆಂಟ್
  • ಸ್ಮಾರ್ಟ್ ಹೋಮ್ ಡಿವೈಸ್‌ಗಳನ್ನು ನಿಯಂತ್ರಿಸಿ
  • ಸಂಗೀತ, ಹವಾಮಾನ ಮತ್ತು ಮುಂತಾದವುಗಳನ್ನು ಪಡೆಯಿರಿ
  • ಮಿರಾಕಾಸ್ಟ್-ಸರ್ಟಿಫೈಡ್ ಆಗಿರುವ ಡಿವೈಸ್‌ಗಳು ಪರಸ್ಪರ ಸಂವಹನ ಮಾಡುತ್ತವೆ, ಅದರ ತಯಾರಕರು ಯಾರೇ ಇದ್ದರೂ ಸರಿ
  • ಹಲವು ಬಳಕೆದಾರ
  • ನಿಮ್ಮ ರೈಲಿಗಾಗಿ ವೈಯಕ್ತಿಕ ಶಿಫಾರಸುಗಳನ್ನು ಪಡೆಯಿರಿ
  • ನಿಮ್ಮ ಪ್ರೊಫೈಲ್ ಪ್ರಕಾರ ಮೆಚ್ಚಿನ ಚಾನೆಲ್‌ಗಳನ್ನು ಮತ್ತು ಲಾಕ್ ಚಾನೆಲ್‌ಗಳನ್ನು ಸೆಟ್ ಮಾಡಿ
  • ನಿಮ್ಮ ವೀಕ್ಷಣೆ ಹಿಸ್ಟರಿ (ಆ್ಯಪ್‌ ಅಥವಾ ಟಿವಿ ಚಾನಲ್‌ಗಳು) ಪ್ರಕಾರ, ನಿಮ್ಮ ಹೋಮ್ ಸ್ಕ್ರೀನ್ ಮೇಲೆ ಪಾಪುಲೇಟ್ ಆಗಲು ಇತ್ತೀಚಿನ ರೈಲ್
  • ಹೋಮ್ ಸ್ಕ್ರೀನ್ ರೈಲ್ ಕಸ್ಟಮೈಸೇಶನ್ ಆಯ್ದ ಪ್ರೊಫೈಲ್ ಪ್ರಕಾರ ಬದಲಾಗುತ್ತದೆ
  • ಇದನ್ನು ನಿಯಂತ್ರಿಸಿ
  • ನಿಮ್ಮ ಆಂಡ್ರಾಯ್ಡ್ ಬಾಕ್ಸಿಗೆ ರಿಮೋಟ್ ಆಗಿ ನಿಮ್ಮ ಆಂಡ್ರಾಯ್ಡ್ ಫೋನ್ ಅಥವಾ ಟ್ಯಾಬ್ಲೆಟ್ ಬಳಸಿ
  • ಪ್ಲೇಸ್ಟೋರ್‌ನಲ್ಲಿ ನಲ್ಲಿ ಲಭ್ಯವಿರುವ ATV ರಿಮೋಟ್ ಆ್ಯಪ್ ಡೌನ್ಲೋಡ್ ಮಾಡಿ
  • ಡಿ-ಪ್ಯಾಡ್ ಮತ್ತು ಟಚ್‌‌ಪ್ಯಾಡ್ ಮೋಡ್‌‌ಗಳ ನಡುವೆ ಸುಲಭವಾಗಿ ಬದಲಾಯಿಸಿ
  • ವಾಯ್ಸ್ ಸರ್ಚ್ ಆರಂಭಿಸಲು ಮೈಕ್ ಲಭ್ಯವಿದೆ, ಅಥವಾ ಕೀಬೋರ್ಡ್ ಬಳಸಿ
  • ಕ್ರೋಮ್‌ಕಾಸ್ಟ್
  • ಆ್ಯಪ್‌ಗಳಲ್ಲಿ ಮೀಡಿಯಾವನ್ನು ಹುಡುಕಿ ಮತ್ತು ಪ್ಲೇ ಮಾಡಿ
  • ಟಿವಿ ನೋಡುವಾಗ ಪ್ರಶ್ನೆಗಳನ್ನು ಕೇಳಿ
  • ಸ್ಮಾರ್ಟ್ ಹೋಮ್ ಡಿವೈಸ್‌ಗಳನ್ನು ನಿಯಂತ್ರಿಸಿ
  • ಸಂಗೀತ, ಹವಾಮಾನ ಮತ್ತು ಮುಂತಾದವುಗಳನ್ನು ಪಡೆಯಿರಿ

    Watcho ಧಮಾಲ್ ಜೊತೆಗೆ ಒಂದು ತಿಂಗಳಿಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ₹1066 ಮೌಲ್ಯದ 16 ಒಟಿಟಿ ಆ್ಯಪ್‌ಗಳನ್ನು ಆನಂದಿಸಿ.

    watcho dhamaal pack

    ಷರತ್ತು ಅನ್ವಯ
    ಮೇಲಕ್ಕೆ ಸ್ಕ್ರೋಲ್ ಮಾಡಿ